ಭಾರತದ ಮೊದಲ ಖಾಸಗಿ ಬಾಹ್ಯಾಕಾಶ ನೌಕೆ ವಿಕ್ರಮ್-1 ಯಶಸ್ವಿ ಉಡಾವಣೆ

11.30ಕ್ಕೆ ನಿಗದಿಯಾಗಿ ವಿಳಂಬಗೊಂಡಿದ್ದ ಉಡಾವಣೆ

Update: 2026-07-18 12:12 IST

Photo credit: PTI

ಶ್ರೀಹರಿಕೋಟಾ: ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಬಾಹ್ಯಾಕಾಶ ನೌಕೆ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ವಿಕ್ರಮ್-1 ಉಡಾವಣೆಗೊಂಡಿದೆ. ಇದು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಈ ಮೊದಲು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶನಿವಾರ ಬೆಳಿಗ್ಗೆ 11.30 ಕ್ಕೆ ಉಡಾವಣೆಗೆ ನಿಗದಿಯಾಗಿತ್ತು. ಆದರೆ ತಾಂತ್ರಿಕ ಕಾರಣದಿಂದ ನಿಗದಿತ ಉಡಾವಣೆಗಿಂತ ಐದು ನಿಮಿಷಗಳ ಮೊದಲು ಅಧಿಕಾರಿಗಳು ಉಡಾವಣೆಯನ್ನು ವಿಳಂಬಗೊಳಿಸಿದ್ದರು. ಇದೀಗ ಮತ್ತೆ 12.05ಕ್ಕೆ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News