×
Ad

ನರೇಗಾ ಕೂಲಿ ಹಣ ಪಾವತಿಯಲ್ಲಿ ಅನ್ಯಾಯ ಆರೋಪ; ಪಂಚಾಯತ್‌ಗೆ ಬೀಗ ಹಾಕಿ ಪ್ರತಿಭಟನೆ

Update: 2026-05-27 13:14 IST

ಅರಕೇರಾ: ನರೇಗಾ ಯೋಜನೆಯಲ್ಲಿ ಕೂಲಿಕಾರರಿಗೆ ಸಿಗಬೇಕಾದ ಕೂಲಿ ಹಣ ಪಾವತಿಯಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೃಷಿ ಕೂಲಿ ಕಾರ್ಮಿಕರು ಅರಕೇರಾ ತಾಲೂಕಿನ ರಾಮದುರ್ಗ ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನರೇಗಾ ಯೋಜನೆಯಡಿ ಕೂಲಿ ಹಣ ನಿರ್ಧರಿಸುವಾಗ ಮೆಷರ್‌ಮೆಂಟ್ ಸರಿಯಾಗಿ ನೋಡುತ್ತಿಲ್ಲ. ಕೂಲಿ ಕೆಲಸದ ಮೇಲೆ ಹಣ ನಿರ್ಧರಿಸಲಾಗುತ್ತಿದೆ. ಯಾವ ಕೂಲಿಕಾರರು ಎಷ್ಟು ಕೆಲಸ ಮಾಡಿದ್ದಾರೆ ಎಂಬ ಆಧಾರದ ಮೇಲೆ ಹಣ ಪಾವತಿ ಮಾಡಲಾಗುತ್ತಿದೆ. ಆದರೆ ಮೆಷರ್‌ಮೆಂಟ್ ಪ್ರಕಾರ ಕೂಲಿ ಹಣ ನೀಡಲಾಗುತ್ತಿದೆ. ಕೆಲವರಿಗೆ ಕೂಲಿ 150 ರೂ. ಪಾವತಿಸಲಾಗಿದೆ. ಇನ್ನು ಕೆಲವರಿಗೆ ಅದಕ್ಕಿಂತಲೂ ಕಡಿಮೆ ಹಣ ಪಾವತಿಯಾಗಿದೆ.

ಅದಲ್ಲದೆ ಕೆಲಸ ಮಾಡುವ ಸ್ಥಳದಲ್ಲಿ ಕುಡಿಯುವ ನೀರಿನ ಕ್ಯಾನ್ ಮಾತ್ರ ಕೊಡಲಾಗುತ್ತಿದೆ. ಆದರೆ ನೀರು ಕೊಡುತ್ತಿಲ್ಲ ಎಂದು ರಾಮದುರ್ಗ ಗ್ರಾಮ ಪಂಚಾಯತಿ ಪಿಡಿಓ ಹಾಗೂ ಆಡಳಿತಾಧಿಕಾರಿಗಳ ವಿರುದ್ಧ ಕೃಷಿ ಕೂಲಿಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಕೂಲಿಕಾರರು ಗ್ರಾಮ ಪಂಚಾಯತಿ ಕಚೇರಿಗೆ ಬೀಗಮುದ್ರೆ ಹಾಕಿ  ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News