×
Ad

ಉನ್ನತ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುವ ಕಾರ್ಯ ಸಾಮಾನ್ಯವಲ್ಲ: ಟಿ.ಶ್ರೀನಿವಾಸ

Update: 2026-05-08 00:09 IST

ರಾಯಚೂರು: ಇಲ್ಲಿನ ನವೋದಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್. ಆರ್. ರೆಡ್ಡಿ ಅವರ ಜನ್ಮದಿನವನ್ನು ಬುಧವಾರ ನವೋದಯ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಸುದರ್ಶನ್ ರಾಜೇಂದ್ರ (ಎಸ್ ಆರ್ )ರೆಡ್ಡಿ ಅವರ ಅಭಿಮಾನ ಬಳಗದ ವತಿಯಿಂದ ಸಂಸ್ಥೆಯ ಅಧ್ಯಕ್ಷ ಎಸ್ ಆರ್ ರೆಡ್ಡಿ ಅವರ ಜನ್ಮದಿನದ ಪ್ರಯುಕ್ತ 65 ಕೆ.ಜಿ. ತೂಕದ ಬೃಹದಾಕಾರದ ಕೇಕ್ ಕತ್ತರಿಸಿ ಸಂಭ್ರಮಿಸಿದರು.

ನಂತರ ಮಾತನಾಡಿದ ನವೋದಯ ಶಿಕ್ಷಣ ಸಂಸ್ಥೆ ಯ ರಿಜಿಸ್ಟಾರ್ ಟಿ ಶ್ರೀನಿವಾಸ್ ಅವರು , ಎಸ್ ಆರ್ ರೆಡ್ಡಿ ಅವರ ಶಿಕ್ಷಣ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆ ಹೃದಯ ಶ್ರೀಮಂತಿಕೆ ಅವರ ಸರಳತೆ ಅವರ ನಿಸ್ವಾರ್ಥ ರಾಜಕಾರಣ ಇವುಗಳ ಬಗ್ಗೆ ತಿಳಿಸಿದರು ಮತ್ತು ಇಂಥ ಧೀಮಂತ ಪುರುಷರು ಎಲ್ಲರಿಗೂ ಆದರ್ಶರಾಗಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ತಲಕಾಯಿ ಮಾರೆಪ್ಪ ಮಾತನಾಡಿ, ನವೋದಯ ಶಿಕ್ಷಣ ಸಂಸ್ಥೆಯ ಮೂಲಕ ಎಸ್ ಆರ್ ರೆಡ್ಡಿ ಅವರು ಕಲ್ಯಾಣ ಕರ್ನಾಟಕ ಪ್ರಾಂತ್ಯದಲ್ಲಿ ಉನ್ನತ ಶಿಕ್ಷಣದ ಕ್ರಾಂತಿ ಮೂಡಿಸಿದ್ದಾರೆ. ಹಿಂದುಳಿದ ಪ್ರದೇಶ ಎಂಬ ಹಣೆ ಪಟ್ಟಿ ಕಟ್ಟಿ ಕೊಂಡಿರುವ ರಾಯಚೂರು ಜಿಲ್ಲೆಯಲ್ಲಿ ದೊಡ್ಡ ಸಂಸ್ಥೆ ಕಟ್ಟಿ ಬೆಳೆಸಿದ ಮಾದರಿಯಾಗಿದ್ದಾರೆ.

ತೆಲಂಗಾಣ ರಾಜ್ಯದ ನಾರಾಯಣಪೇಟ್ ಮತ ಕ್ಷೇತ್ರದ ಮಾಜಿ ಶಾಸಕರಾದ ಸುದರ್ಶನ್ ರಾಜೇಂದ್ರ ರೆಡ್ಡಿ ಅವರು ಶಾಸಕರಾಗಿದ್ದಾಗ ಜನರಿಗೆ ಉತ್ತಮ ಆಡಳಿತ ನೀಡಿದ್ದಾರೆ ಹೀಗಾಗಿ ಅವರು ಎರಡು ಸಲ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು ಇವತ್ತಿಗೂ ಅಲ್ಲಿಯ ಜನ ಇವರ ಕೆಲಸವನ್ನು ಜನಪರ ಕಾಳಜಿ, ಸರಳತೆ ವ್ಯಕ್ತಿತ್ವ ಸ್ಮರಿಸುತ್ತಾರೆ ಎಂದು ಮಾರೆಪ್ಪ ನುಡಿದರು.

ರೆಡ್ಡಿ ಸರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಕೋರಿದರಲ್ಲದೇ ದೇವರು ಆರೋಗ್ಯ ಆಯಸ್ಸು ನೀಡಿ ಕರುಣಿಸಲಿ ಎಂದು ಶುಭಕೋರಿದರು.

ಶಿಕ್ಷಣದ ತಜ್ಞ ತಪಸ್ವಿ ಮತ್ತು ನಿರಂತರ ಸಾಧಕರಾದ ರೆಡ್ಡಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಕ್ರಾಂತಿ ಮಾಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಹೊಸ ಭಾಷ್ಯ ಬರೆಯಲಿ ಎಂದು ಕಾಲೇಜ್ ಗಣ್ಯರು ಮತ್ತು ಸಿಬ್ಬಂದಿ ವರ್ಗದವರು ಶುಭ ಹಾರೈಸಿದರು. ಹೆಸರೆಡ್ಡಿ ಅವರ ಸುಪುತ್ರ ಅಮೃತ್ ರೆಡ್ಡಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಿಗೂ ಸಿಹಿ ಹಂಚಿ ಜನ್ಮದಿನದ ಶುಭ ಕೋರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News