×
Ad

ಮಾನ್ವಿ ಬೃಹತ್ ಆರೋಗ್ಯ ಮೇಳ ; ಪೂರ್ವ ಸಿದ್ದತೆ ಪರಿಶೀಲನೆ

Update: 2025-03-12 17:58 IST

ರಾಯಚೂರು : ಮಾನ್ವಿಯಲ್ಲಿ ಆಯೋಜಿಸಿದ ಆರೋಗ್ಯ ಮೇಳದ ಸಿದ್ಧತೆ ಭರದಿಂದ ನಡೆದಿದ್ದು, ಕಿವಿ, ಮೂಗು ಮತ್ತು ಗಂಟಲು, ನೇತ್ರ ಚರ್ಮರೋಗ, ದಂತ, ಶ್ವಾಸಕೋಶ ಸೇರಿ ಹಲವಾರು ತಜ್ಞ ವೆದ್ಯರು ಆಗಮಿಸಲಿದ್ದಾರೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ರಾಯಚೂರು ವಿಭಾಗದ ಸಹಾಯಕ ಆಯುಕ್ತರಾದ ಗಜಾನನ ಬಾಳೆ ಅವರು ಸಲಹೆ ನೀಡಿದರು.

ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆರೋಗ್ಯ ಮೇಳವನ್ನು ಆಯೋಜನೆ ಮಾಡಲಾಗಿದ್ದು, ಮಾ.11ರ ಮಂಗಳವಾರ ದಂದು ಸ್ಥಳಕ್ಕೆ ಭೇಟಿ ನೀಡಿ ಪೂರ್ವ ಸಿದ್ದತೆ ಪರಿಶೀಲಿಸಿ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಜಿಲ್ಲೆಯಲ್ಲಿರುವ ಜನರಿಗೆ ಉತ್ತಮವಾಗಿ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡಲು ಬೃಹತ್ ಆರೋಗ್ಯ ಮೇಳವನ್ನು ಏರ್ಪಡಿಸಲಾಗಿದ್ದು, ಆರೋಗ್ಯ ಮೇಳದಲ್ಲಿ ವಿವಿಧ ವಿಭಾಗಗಳ 200ಕ್ಕೂ ಹೆಚ್ಚು ತಜ್ಞ ವೈದ್ಯರು ಪಾಲ್ಗೊಳ್ಳಲಿದ್ದಾರೆ.

ಹೃದಯ, ಸ್ತ್ರೀ ರೋಗ, ಮಕ್ಕಳಿಗೆ ಸಂಬಂಧಿಸಿದ ಕಾಯಿಲೆ, ಎಲುಬು ಮತ್ತು ಕೀಲು ಸಮಸ್ಯೆ, ಮಾನಸಿಕ ರೋಗ, ಕಿಡ್ನಿ, ಇಎನ್‌ಟಿ, ಚರ್ಮರೋಗ, ದಂತ, ಶ್ವಾಸಕೋಶ, ಕ್ಯಾನ್ಸರ್‌ಗೆ ಸಂಬಂಧಿಸಿದ ಕಾಯಿಲೆಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲಿದ್ದಾರೆ. ಉಚಿತವಾಗಿ ಪ್ರಯೋಗಾಲಯ ಪರೀಕ್ಷೆ, ಕ್ಷಯ ರೋಗ ಪರೀಕ್ಷೆ ಸಂಬಂಧಿಸಿದ್ದ ಎಲ್ಲ ತಪಾಸಣೆಗಳನ್ನು ಮೇಳದಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಮಾತನಾಡಿರು.

ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ನಂದಿತಾ, ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಬಸವ ಸೇರಿದಂತೆ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News