×
Ad

ರಾಯಚೂರು | ಕಳ್ಳತನ ಪ್ರಕರಣಗಳ ಆರೋಪಿಯ ಬಂಧನ; ಎಂಟು ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

Update: 2025-05-12 10:50 IST

ರಾಯಚೂರು: ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಎಂಟು ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹೇರೂರು ನಿವಾಸಿ ಹನುಮಂತ ಸಿಂಗ್ ಬಂಧಿತ ಆರೋಪಿ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕು ಸುತ್ತಮುತ್ತ ಹಾಗೂ ಬಾಗಲಕೋಟೆ ಜಿಲ್ಲೆಯ ಭಾಗದಲ್ಲಿ ಮನೆ ಕಳ್ಳತನ ಮಾಡಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಹುಡುಕಾಟ ನಡೆಸಿದ್ದರು.

ಲಿಂಗಸೂಗುರು ತಾಲೂಕಿನ ಗುರುಗುಂಟಾ ಗ್ರಾಮದ ನಿವಾಸಿ ವಿರುಪಾಕ್ಷಪ್ಪ ಗುರಪ್ಪ ಸಜ್ಜನ್ ಮನೆಯಲ್ಲಿ 2024ರ ಅ.11 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು 80 ಸಾವಿರ ಮೌಲ್ಯದ, 2 ತೊಲೆಯ ಬಂಗಾರದ ಅವಲಕ್ಕಿ ಸರ,30 ಸಾವಿರ ಮೌಲ್ಯದ 8 ಗ್ರಾಂ ಬಂಗಾರದ ಕಿವಿಯ ಹ್ಯಾಂಗಿಗ್ಸ್, 8 ತೊಲೆಯ ಬೆಳ್ಳಿಯ ಕಾಲು ಚೈನ್, ಹಾಗೂ 50 ಸಾವಿರ ಹಣ ಸೇರಿ ಒಟ್ಟು 2,43,000 ರೂ. ನಗದು ದೋಚಿ ಪರಾರಿಯಾಗಿದ್ದರು.

ಎಸ್ಪಿ ಪುಟ್ಟ ಮಾದಯ್ಯಾ, ಹೆಚ್ಚುವರಿ ಪೋಲಿಸ್ ಅಧೀಕ್ಷಕ ಹರೀಶ್, ಡಿಎಸ್ಪಿ ದತ್ತಾತ್ರೇಯ ಕಾರ್ನಾಡ್ ಮಾರ್ಗದರ್ಶನದಲ್ಲಿ ಪ್ರಕರಣವನ್ನು ತನಿಖೆ ಚುರುಕಾಗಿ ನಡೆಸಲಾಗಿತ್ತು. ಹಟ್ಟಿ ಪಟ್ಟಣದ ಪಾಮನಕಲ್ಲೂರು ಕ್ರಾಸ್ ಹತ್ತಿರ ಹನುಮಂತ ಸಿಂಗ್ ನನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದಾಗ ಆರೋಪಿ ತಪ್ಪೊಪಿಕೊಂಡಿದ್ದಾನೆ. ಬಂಧಿತ ಆರೋಪಿಯಿಂದ ಬಂಗಾರದ ಆಭರಣಗಳು ಸೇರಿ ಒಟ್ಟು 4,38,240 ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಸಿದ್ದಾರೆ.

ಚಿನ್ನಾಭರಣಗಳನ್ನು ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಆರೋಪಿತನ ಮತ್ತು ಕಳ್ಳತನ ಪ್ರಕರಣ ಪತ್ತೆ ಹಚ್ಚುವಲ್ಲಿ ಹಟ್ಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಹೊಸಕೇರಪ್ಪ ಕೆ. ಧರ್ಮಣ ಪಿ.ಎಸ್ಸೈ ಶೇಕ್ ರಹ್ಮಾನ್ ಎಎಸ್ಸೈ ಹಾಗೂ ಸಿಬ್ಬಂದಿಯವರಾದ ನಾರಾಯಣ, ಬಸವರಾಜ, ವಿಶ್ವನಾಥ, ಬಸವರಾಜ, ವಿಜಯ, ಬಸವರಾಜ ಅಮರೇಶ, ಶರಣಬಸವ ನಾಗಾರ್ಜುನ, ಹಾಗೂ ಅಜೀಂ ಪಾಷಾ ಜಿಲ್ಲಾ,, ಪೊಲೀಸ್ ಕಚೇರಿ ಒಳಗೊಂಡ ವಿಶೇಷ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News