ರಾಯಚೂರು| ನೆಲ ಅಗೆದು ಬಿಎಸ್‌ಎನ್‌ಎಲ್ ತಂತಿ ಕಳ್ಳತನ; ಅಂದಾಜು 15 ಲಕ್ಷ ರೂ.ನಷ್ಟ
Update: 2025-12-17 20:45 IST
ರಾಯಚೂರು: ನಗರದ ಅಂದ್ರೂನ್ ಕಿಲ್ಲಾ ಬಡಾವಣೆಯಲ್ಲಿರುವ ಬಿಎಸ್ ಎನ್ ಎಲ್ ಮುಖ್ಯ ಕಚೇರಿಯಿಂದ ದುಷ್ಕರ್ಮಿಗಳು ನೆಲವನ್ನು ಅಗೆದು ಬಿಎಸ್ಎನ್ಎಲ್ ಸಂಪರ್ಕ ತಂತಿ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಸದರ್ ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು ಒಂದೂವರೆ ಕಿಮೀನಷ್ಟು ತಂತಿ ಕಳ್ಳತನವಾಗಿದೆ ಎನ್ನಲಾಗಿದ್ದು, ಅದರ ಮೌಲ್ಯ 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಸುಮಾರು 20 ರಿಂದ 30 ಜನ ಇರುವ ತಂಡದಿಂದ ಈ ಕೃತ್ಯ ನಡೆದಿರಬಹುದು ಎಂದು ಹೇಳಲಾಗಿದ್ದು ಸೋಮವಾರ ರಾತ್ರಿ 12.30 ರಿಂದ ಬೆಳಗಿನ ಜಾವ 5 ಗಂಟೆವರೆಗಿನ ಸಮಯಯದಲ್ಲಿ ತಂತಿ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದೆ.