×
Ad

ರಾಯಚೂರು | ಜಿಲ್ಲಾಡಳಿತದಿಂದ ಭಗವಾನ್ ಬುದ್ಧ ಜಯಂತಿ ಆಚರಣೆ

Update: 2025-05-12 19:22 IST

ರಾಯಚೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಆಶ್ರಯದಲ್ಲಿ ಮೇ 12 ರಂದು ಭಗವಾನ್ ಬುದ್ಧ ಜಯಂತಿ ಆಚರಣೆ ನಡೆಯಿತು.

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ತಹಶೀಲ್ದಾರ್‌ ಸುರೇಶ್ ವರ್ಮಾ ಮತ್ತು ಡಾ.ಅಪ್ಪಗೆರೆ ಸೋಮಶೇಖರ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೆ ವೇಳೆ ಭಗವಾನ್ ಬುದ್ಧ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಈ ವೇಳೆ ಚಿಂತಕರು, ಖ್ಯಾತ ವಾಗ್ಮಿಗಳಾದ ಡಾ.ಅಪ್ಪಗೆರೆ ಸೋಮಶೇಖರ್ ಅವರು ಮಾತನಾಡಿ, ಪವಿತ್ರವಾದ ಭರತ ಖಂಡದಲ್ಲಿ ಜನಿಸಲು ಪುಣ್ಯ ಮಾಡಿರಬೇಕು. ಈ ನೆಲದಲ್ಲಿ ಅನೇಕ ಸಾದು ಸಂತರು ಶರಣರು ಜನಿಸಿ ನಮಗೆ ಉತ್ತಮವಾದ ಜೀವನ ಮೌಲ್ಯಗಳನ್ನು ತಿಳಿಸಿದ್ದಾರೆ. ಅಂತಹ ಮಹನಿಯರಲ್ಲಿ ಭಗವಾನ್ ಬುದ್ಧ ಅವರು ಸಹ ಒಬ್ಬರಾಗಿದ್ದಾರೆ. ಭಗವಾನ್ ಬುದ್ಧ ಅವರು ಹೇಳಿದ ತತ್ವಗಳ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಚಲುವಾದಿ ಸಮಾಜದ ಜಿಲ್ಲಾಧ್ಯಕ್ಷರಾದ ಭೀಮಣ್ಣ , ಬುದ್ಧ ವಿಹಾರದ ಗೌರವಾಧ್ಯಕ್ಷರಾದ ರವೀಂದ್ರನಾಥ್, ಆರ್ ರವಿಕುಮಾರ್, ರಾಯಚೂರು ಕೃವಿವಿ ಅಧ್ಯಕ್ಷರಾದ ಮಲ್ಲೇಶ ಕೋಮ್, ಸಮುದಾಯದ ಉಪಾಧ್ಯಕ್ಷರಾದ ಆರ್.ತಿಮ್ಮಾರೆಡ್ಡಿ, ಸಮುದಾಯದ ಮುಖಂಡರಾದ ಕೆ. ಕುಮಾರ್, ಸಮಾಜದ ಸದಸ್ಯರಾದ ಆಂಜನೇಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೆರವಣಿಗೆಗೆ ಚಾಲನೆ :

ಬೆಳಗ್ಗೆ, ನಗರದ ಬುದ್ಧ ವಿಹಾರದಲ್ಲಿ ಆರಂಭವಾದ ಭಗವಾನ್ ಬುದ್ಧ ಅವರ ಭಾವಚಿತ್ರ ಮೆರವಣಿಗೆಗೆ ರಾಯಚೂರು ತಾಲ್ಲೂಕಿನ ತಹಶೀಲ್ದಾರ್ ಸುರೇಶ ವರ್ಮಾ ಅವರು ಚಾಲನೆ ನೀಡಿದರು. ಅಲ್ಲಿಂದ ಆರಂಭಗೊಂಡ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ರಂಗಮಂದಿರಕ್ಕೆ ಬಂದು ಸೇರಿತು.

ಸನ್ಮಾನ :

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗು ಉಪನ್ಯಾಸಕರಾದ ಡಾ.ಅಪ್ಪಗೆರೆ ಸೋಮಶೇಖರ್ ಮತ್ತು ರಾಯಚೂರು ತಾಲೂಕಿನ ತಹಶೀಲ್ದಾರ್ ಸುರೇಶ ವರ್ಮಾ ಹಾಗೂ ಬುದ್ದ ಸಮಾಜದ ಮುಖಂಡರು, ನೌಕರ ಬಾಂಧವರಿಗೆ ಸನ್ಮಾನಿಸಿ ಗೌರವಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News