×
Ad

ರಾಯಚೂರು | ಸಿಡಿಲು ಬಡಿದು ಇಬ್ಬರು ಮಹಿಳೆಯರಿಗೆ ಗಾಯ

Update: 2025-05-14 08:50 IST

ರಾಯಚೂರು: ಮಸ್ಕಿ ತಾಲೂಕಿನಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆ‌ ಸುರಿದಿದ್ದು, ಸಿಡಿಲು ಬಡಿದು ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡ ಘಟನೆ ಮಸ್ಕಿ ತಾಲ್ಲೂಕಿನ ತಲೇಖಾನ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮಿ ಮುದುಕಪ್ಪ (40) ,ಹನುಮಂತಿ ಯಲ್ಲಪ್ಪ (52) ಸಿಡಿಲು ಬಡಿದು ಗಂಭೀರ ಗಾಯಗೊಂಡವರು ಎಂದು ಹೇಳಲಾಗಿದೆ.

ಮಸ್ಕಿ ತಾಲೂಕಿನ ಹಲವಡೆ ಸಂಜೆ ಮಳೆ ಪೂರ್ವ ಮುಂಗಾರು ಮಳೆ ಸುರಿದಿದ್ದು, ಹೊಲದಲ್ಲಿ ಕೃಷಿ ಕೂಲಿ ಕೆಲಸ ನಿರ್ವಹಿಸುವಾಗ ಸಿಡಿಲು ಬಡಿದಿದೆ ಎನ್ನಲಾಗಿದೆ.

ಗಾಯಾಳುಗಳನ್ನು ಲಿಂಗಸೂಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.‌ ಗಾಯಾಳುಗಳಿಗೆ ಮಸ್ಕಿ ತಾಲೂಕು ಶಾಸಕರಾದ ಬಸನಗೌಡ ತುರುವಿಹಾಳ ಹಾಗೂ ತಾಲ್ಲೂಕು ತಹಶೀಲ್ದಾರ್‌ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News