Shivamogga | ಕೆರೆಯಲ್ಲಿ ಮುಳುಗಿ ಅವಿತಿದ್ದ ಆರೋಪಿಯ ಬಂಧನ
ಶಿವಮೊಗ್ಗ : ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಯಲ್ಲಿ ಮುಳುಗಿ ಅವಿತಿದ್ದ ವಿಚಿತ್ರ ಘಟನೆ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿ ಪಟ್ಟಣ ಸೇರಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ ಸುಮಾರು 16 ಪ್ರಕರಣಗಳಲ್ಲಿ ಬೇಕಾಗಿದ್ದ ದಿಲೀಪ್ ಅಲಿಯಾಸ್ ಕರಿಯ ಜಾಮೀನು ಪಡೆದು ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದನು. ಈತನನ್ನು ಹಿಡಿದು ತರುವಂತೆ ನ್ಯಾಯಾಲಯ ಆದೇಶ ನೀಡಿತ್ತು.
ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಭದ್ರಾವತಿ ನ್ಯೂ ಟೌನ್ ಪೊಲೀಸರು, ದಿಲೀಪ್‌ನನ್ನು ಹಿಡಿಯಲು ಹೋದಾಗ ಆತ ತಪ್ಪಿಸಿಕೊಂಡು ಕೆರೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ನೀರಿನಲ್ಲಿಯೇ ಅಡಗಿ ಕುಳಿತುಕೊಂಡಿದ್ದು, ಆತ ಮೇಲೆ ಬಾರದೇ ಇದ್ದಾಗ ನ್ಯೂ ಟೌನ್ ಪೊಲೀಸರು ನೀರಿಗೆ ಇಳಿದು ವಶಕ್ಕೆ ಪಡೆದಿದ್ದಾರೆ.