ಶಿವಮೊಗ್ಗ | ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಡಿಜಿ-ಐಜಿಪಿ ಪ್ರಶಂಸಾ ಪದಕ
ಎ.ಜಿ. ಕಾರ್ಯಪ್ಪ | ದಿಲೀಪ್ ಎಸ್.ವಿ.
ಶಿವಮೊಗ್ಗ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗೆ ನೀಡಲಾಗುವ 2025 - 26ನೇ ಸಾಲಿನ ಡಿಜಿ ಮತ್ತು ಐಜಿಪಿ ಪ್ರಶಂಸಾ ಪದಕಕ್ಕೆ ಶಿವಮೊಗ್ಗದ ಇಬ್ಬರು ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 200 ಪೊಲೀಸ್ ಅಧಿಕಾರಿ/ಸಿಬ್ಬಂದಿ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಶಿವಮೊಗ್ಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಎ.ಜಿ. ಕಾರ್ಯಪ್ಪ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಡಿವೈಎಸ್ಪಿ ದಿಲೀಪ್ ಎಸ್.ವಿ. ಅವರಿಗೆ ಈ ಪದಕ ಲಭಿಸಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಈ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಡಿವೈಎಸ್ಪಿ ದಿಲೀಪ್ ಎಸ್.ವಿ. ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಿಂಗಳ ಗ್ರಾಮದವರು.
ರಾಜ್ಯಮಟ್ಟದಲ್ಲಿ ಸಮರ್ಥ ಸೇತು ವಿದ್ಯಾರ್ಥಿ ಪೊಲೀಸ್ ಕಾರ್ಯಕ್ರಮವನ್ನು ಎಸ್ಪಿ ಮಾರ್ಗದರ್ಶನದಲ್ಲಿ ಮಾಡಿರುತ್ತಾರೆ.