×
Ad

ರಾಷ್ಟ್ರಧ್ವಜವನ್ನು ಕರವಸ್ತ್ರದಂತೆ ಬಳಸಿದ ಬಿಜೆಪಿ ನಾಯಕರು : ಕಾಂಗ್ರೆಸ್ ಆಕ್ರೋಶ

Update: 2025-05-08 19:41 IST

ಬೆಂಗಳೂರು : ಭಾರತೀಯ ಸೇನೆ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ ಮೂಲಕ ನಡೆಸಿದ ದಾಳಿಯ ಸಂಭ್ರಮ ಆಚರಣೆ ಮಾಡಲು ಬೆಂಗಳೂರಿನ ಜಯನಗರದಲ್ಲಿ ನಡೆದ ಸಿಹಿ ಹಂಚಿಕೆ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಹಾಗೂ ಬಿಜೆಪಿ ನಾಯಕರು ಕರವಸ್ತ್ರದಂತೆ ಬಳಸಿ ಅಪಮಾನಿಸಿದ್ದಾರೆ ಎಂದು ಕಾಂಗ್ರೆಸ್ ಕಿಡಿಗಾರಿದೆ.

ಗುರುವಾರ ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಬಿಜೆಪಿ ನಾಯಕರೊಬ್ಬರು ರಾಷ್ಟ್ರಧ್ವಜವನ್ನು ಕರವಸ್ತ್ರದಂತೆ ಬಳಸಿರುವ ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್, ನಕಲಿ ದೇಶಪ್ರಮಿ ಬಿಜೆಪಿಗರು ಭಾರತದ ರಾಷ್ಟ್ರಧ್ವಜ, ಸಂವಿಧಾನವನ್ನು ಎಂದಿಗೂ ಒಪ್ಪಿಲ್ಲ. ಮನುವಾದಿಗಳು ಸಮಾನತೆ, ಐಕ್ಯತೆ, ಸಮಗ್ರತೆ ಸಾರುವ ರಾಷ್ಟಧ್ವಜವನ್ನು ಒಪ್ಪಲು ಸಾಧ್ಯವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಶಾಸಕ ರಾಮಮೂರ್ತಿ ಮತ್ತು ಅವರ ಬೆಂಬಲಿಗರು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮ ಆಚರಣೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಶಾಸಕರ ಪಕ್ಕದಲ್ಲಿದ್ದ ಬಿಜೆಪಿ ಮುಖಂಡರೊಬ್ಬರು ಸಿಹಿ ಹಂಚಿದ ಕೈಯನ್ನು ರಾಷ್ಟ್ರಧ್ವಜಕ್ಕೆ ಒರೆಸಿಕೊಂಡರು. ಇದನ್ನು ರಾಮಮೂರ್ತಿ ನೋಡಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News