Picture by AINAGOC

ನಗೋಯ: ಜಪಾನ್‌ನ ನಗೋಯದಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್‌ನಲ್ಲಿ ಗುರುವಾರ ಮಿಶ್ರ 4x400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತ ಬೆಳ್ಳಿ ಪದಕ ಗೆದ್ದುಕೊಂಡಿದೆ.

ನಗೋಯ ಸಿಟಿ ಮಿಜುಹೊ ಪಾರ್ಕ್ ಅತ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ, ವಿಶಾಲ್ ಟಿ.ಕೆ., ವಿದ್ಯಾ ರಾಮರಾಜ್, ಮನು ಸಾಜಿ ಮತ್ತು ಎಂ.ಆರ್. ಪೂವಮ್ಮ ಅವರನ್ನೊಳಗೊಂಡ ಭಾರತೀಯ ತಂಡವು 3 ನಿಮಿಷ 14.46 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದಿತು.

ಬಹರೈನ್ ತಂಡವು ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದಿತು.

ಭಾರತೀಯ ನಾಲ್ವರ ತಂಡಕ್ಕೆ ಆರಂಭ ಉತ್ತಮವಾಗಿರಲಿಲ್ಲ. ಮನು ಅವರ ನೀರಸ ಮೊದಲ ಚರಣದ ನಂತರ, ಎರಡನೇ ಚರಣದಲ್ಲಿ ಪೂವಮ್ಮ ಓಡಿದಾಗ ಭಾರತ ಆರನೇ ಸ್ಥಾನದಲ್ಲಿತ್ತು.

ಆದರೆ ಮೂರನೇ ಚರಣದಲ್ಲಿ ಪರಿಸ್ಥಿತಿ ಬದಲಾಯಿತು. ವಿಶಾಲ್ ವೇಗವನ್ನು ಹೆಚ್ಚಿಸಿ ಭಾರತವನ್ನು ಪದಕದ ಸ್ಪರ್ಧೆಯಲ್ಲಿರಿಸಿದರು. ಅಂತಿಮ ಚರಣದಲ್ಲಿ ವಿದ್ಯಾ ಅದೇ ವೇಗವನ್ನು ಕಾಯ್ದುಕೊಂಡರು. ಅಂತಿಮ ಹಂತದಲ್ಲಿ ವಿಯೆಟ್ನಾಂಅನ್ನು ಹಿಂದಿಕ್ಕಿ ಭಾರತ ಎರಡನೇ ಸ್ಥಾನ ಪಡೆಯಲು ನೆರವಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor