×
Ad

FIFA 2026 | ಪೇಪೆ ಅವಳಿ ಗೋಲು, ಮೊದಲ ಬಾರಿ ನಾಕೌಟ್ ಹಂತಕ್ಕೇರಿದ ಐವರಿ ಕೋಸ್ಟ್

Update: 2026-06-26 20:55 IST

ನಿಕೊಲಸ್ ಪೇಪೆ | Photo Credit : AP 

ಫಿಲಡೆಲ್ಫಿಯಾ, ಜೂ.26: ನಿಕೊಲಸ್ ಪೇಪೆ ಗಳಿಸಿದ ಅವಳಿ ಗೋಲುಗಳ ನೆರವಿನಿಂದ ಕ್ಯುರಾಕೊ ತಂಡವನ್ನು 2-0 ಅಂತರದಿಂದ ಮಣಿಸಿರುವ ಐವರಿ ಕೋಸ್ಟ್ ತಂಡವು ಇದೇ ಮೊದಲ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ನಾಕೌಟ್ ಸುತ್ತಿಗೇರಿ ಇತಿಹಾಸ ನಿರ್ಮಿಸಿದೆ.

ನಾಲ್ಕನೇ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಭಾಗಿಯಾಗಿರುವ ಐವರಿ ಕೋಸ್ಟ್ ತಂಡವು ‘ಇ’ ಗುಂಪಿನಲ್ಲಿ ಆರಂಕವನ್ನು ಗಳಿಸಿ ಎರಡನೇ ಸ್ಥಾನ ಪಡೆದಿದೆ. ಪಶ್ಚಿಮ ಆಫ್ರಿಕಾ ದೇಶವು ಜೂನ್ 30ರಂದು ನಡೆಯಲಿರುವ ಅಂತಿಮ-32ರ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ ಅಥವಾ ನಾರ್ವೆ ತಂಡವನ್ನು ಎದುರಿಸಲಿದೆ.

ಶುಕ್ರವಾರ 68,324 ಪ್ರೇಕ್ಷಕರ ಸಮ್ಮುಖದಲ್ಲಿ ಆಡಿದ ಐವರಿ ಕೋಸ್ಟ್ ತಂಡಕ್ಕೆ ಮುಂದಿನ ಸುತ್ತಿಗೇರಲು ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಅಗತ್ಯವಿತ್ತು. ಆದರೆ, ಅದು ಪಂದ್ಯ ಆರಂಭದಿಂದಲೇ ತೀವ್ರ ಸ್ಪರ್ಧಾತ್ಮಕವಾಗಿ ಆಡಿತು.

ನಿಕೊಲಸ್ ಪೇಪೆ ಏಳನೇ ನಿಮಿಷದಲ್ಲಿ ಗೋಲು ಗಳಿಸಿ ಐವರಿ ಕೋಸ್ಟ್ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಕ್ಯೂರಾಕೊದ 37ರ ಹರೆಯದ ಗೋಲ್‌ಕೀಪರ್ ಎಲಾಯ್ ರೂಮ್‌ರನ್ನು ವಂಚಿಸಿ ಪೇಪೆ ಮೊದಲ ಗೋಲು ಗಳಿಸಿದರು.

ನೆದರ್‌ಲ್ಯಾಂಡ್ಸ್ ಮೂಲದ ಪ್ರತಿಭೆಗಳನ್ನೇ ಹೆಚ್ಚು ನೆಚ್ಚಿಕೊಂಡಿರುವ ಕೆರಿಬಿಯನ್‌ನ ಪುಟ್ಟ ದ್ವೀಪರಾಷ್ಟ್ರ ಕ್ಯುರಾಕೊ ತಂಡವು ಒಂದಷ್ಟು ಹೋರಾಟವನ್ನು ನೀಡಿದರೂ ಎದುರಾಳಿ ತಂಡಕ್ಕೆ ಸಮಸ್ಯೆಯೊಡ್ಡಲು ವಿಫಲವಾಗಿದೆ. ಈಕ್ವೆಡಾರ್ ತಂಡದ ವಿರುದ್ಧ 15 ಗೋಲುಗಳನ್ನು ತಡೆದು ಕ್ಯುರಾಕೊ ತಂಡವು ವಿಶ್ವಕಪ್‌ನಲ್ಲಿ ಮೊದಲ ಬಾರಿ ಒಂದು ಅಂಕ ಗಳಿಸುವಲ್ಲಿ ನೆರವಾಗಿದ್ದ ರೋಮ್ ಅವರು ಪಶ್ಚಿಮ ಆಫ್ರಿಕಾದ ನಿರಂತರ ದಾಳಿಯನ್ನು ತಡೆಯುವುದರಲ್ಲಿ ವ್ಯಸ್ತರಾದರು.

64ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ಪೇ, ಐವರಿ ಕೋಸ್ಟ್ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News