ಮೊದಲ ಟೆಸ್ಟ್ | ದಿನೇಶ್ ಚಾಂಡಿಮಾಲ್‌ಗೆ ಭುಜ, ಕುತ್ತಿಗೆಗೆ ಗಾಯ

Update: 2026-08-18 20:32 IST

ದಿನೇಶ್ ಚಾಂಡಿಮಾಲ್‌ | Photo Credit : PTI 

ಗಾಲೆ, ಆ.18: ಗಾಲೆ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ ಭಾರತದ ಎರಡನೇ ಇನಿಂಗ್ಸ್ ವೇಳೆ ಬೌಂಡರಿ ಉಳಿಸುವ ಪ್ರಯತ್ನದಲ್ಲಿದ್ದಾಗ ಕೆಳಗೆ ಬಿದ್ದು ಭುಜ ಹಾಗೂ ಕುತ್ತಿಗೆಗೆ ಗಾಯ ಮಾಡಿಕೊಂಡಿದ್ದ ಶ್ರೀಲಂಕಾದ ಬ್ಯಾಟರ್ ದಿನೇಶ್ ಚಾಂಡಿಮಾಲ್‌ರನ್ನು ಮುನ್ನಚ್ಚರಿಕೆಯ ಕ್ರಮವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಭಾರತದ ಎರಡನೇ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಕೆ.ಎಲ್.ರಾಹುಲ್ ಹೊಡೆತವನ್ನು ತಡೆಯಲು ಡೀಪ್‌ಮಿಡ್‌ವಿಕೆಟ್‌ನತ್ತ ಓಡಿದ ಚಾಂಡಿಮಾಲ್ ಎರಡು ರನ್ ಉಳಿಸುವಲ್ಲಿ ಶಕ್ತರಾದರು. ಆದರೆ ಆಯತಪ್ಪಿ ಬಿದ್ದಾಗ ಗಾಯಗೊಂಡಿದ್ದಾರೆ.

ಘಟನೆಯ ನಂತರ ಶ್ರೀಲಂಕಾ ಬ್ಯಾಟರ್‌ನ ಬಲ ಭುಜ, ತಲೆ ಹಾಗೂ ಕುತ್ತಿಗೆಗೆ ಗಾಯವಾಗಿದೆ. ಶ್ರೀಲಂಕಾದ ತಂಡದ ವೈದ್ಯರು ಹಾಗೂ ಫಿಸಿಯೊಥೆರಪಿಸ್ಟ್ ಮೈದಾನದೊಳಗೆ ದಿನೇಶ್‌ರನ್ನು ತಪಾಸಣೆ ನಡೆಸಿದರು. ಮುನ್ನಚ್ಚರಿಕೆಯ ಸ್ಕ್ಯಾನಿಂಗ್‌ಗಾಗಿ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಶ್ರೀಲಂಕಾದ ಎರಡನೇ ಇನಿಂಗ್ಸ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ದಿನೇಶ್ ಬದಲಿಗೆ ಪಸಿಂದು ಸೂರ್ಯಬಂಡಾರ ಬ್ಯಾಟಿಂಗ್ ಮಾಡಿದರು. ಆದರೆ ಅವರು ಶೂನ್ಯಕ್ಕೆ ಔಟಾದರು.

ಮೊದಲ ಟೆಸ್ಟ್ | ಗಾಯಾಳು ಚಂಡಿಮಾಲ್ ಬದಲಿಗೆ ಸೂರ್ಯ ಬಂಡಾರ

ಗಾಲೆಯಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಗಾಯಾಳು ದಿನೇಶ್ ಚಂಡಿಮಾಲ್ ಬದಲಿಗೆ ಪಸಿಂದು ಸೂರ್ಯಬಂಡಾರ ಅವರನ್ನು ಕಣಕ್ಕಿಳಿಸಲು ಶ್ರೀಲಂಕಾ ಮುಂದಾಗಿದೆ.

ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ, ಆರಂಭದಲ್ಲೇ ಭುಜದ ಗಾಯಕ್ಕೆ ತುತ್ತಾಗಿ ಚಂಡಿಮಾಲ್ ಮೈದಾನದಿಂದ ಹೊರನಡೆದರು. ಅವರ ಸ್ಥಾನವನ್ನು ಈಗ 26 ವರ್ಷದ ಆಟಗಾರ ತುಂಬಿದ್ದಾರೆ.

ನಾಲ್ಕನೇ ದಿನದ ಮೊದಲ ಅವಧಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಚಂಡಿಮಾಲ್ ಬೌಂಡರಿ ತಡೆಯಲು ಡೈವ್ ಮಾಡಿದರು. ಆಗ ಅವರ ಬಲ ಭುಜ ಮತ್ತು ಕುತ್ತಿಗೆಗೆ ಗಾಯವಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟನೆೆಯಲ್ಲಿ ತಿಳಿಸಿದೆ.

ಮೈದಾನದಲ್ಲೇ ತಂಡದ ಫಿಸಿಯೋಥೆೆರಪಿಸ್ಟ್ ಮತ್ತು ವೈದ್ಯರು ಅವರನ್ನು ಪರೀಕ್ಷಿಸಿದ್ದು, ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಕಳೆದ ವಾರ ಭಾರತದ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ ಇಲೆವೆನ್ ತಂಡದ ಭಾಗವಾಗಿದ್ದ ಸೂರ್ಯಬಂಡಾರ, ಎರಡು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 35 ಮತ್ತು 4 ರನ್ ಗಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News