ಗ್ಲೋಬಲ್ ಚೆಸ್ ಲೀಗ್: ಗಂಗ್ಸ್ ಗ್ರ್ಯಾಂಡ್ ಮಾಸ್ಟರ್ಸ್ ಚಾಂಪಿಯನ್
Photo Credit: SUDHAKARA JAIN/thehindu
ಬೆಂಗಳೂರು, ಸೆ. 13: ಟೆಕ್ ಮಹೀಂದ್ರಾ ಮತ್ತು ಫಿಡೆ ಜಂಟಿಯಾಗಿ ಆಯೋಜಿಸಿರುವ ಗ್ಲೋಬಲ್ ಚೆಸ್ ಲೀಗ್ (GSL)ನ ನಾಲ್ಕನೇ ಆವೃತ್ತಿಯಲ್ಲಿ ಗಂಗ್ಸ್ ಗ್ರ್ಯಾಂಡ್ ಮಾಸ್ಟರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ರವಿವಾರ ನಡೆದ ಫೈನಲ್ ನಲ್ಲಿ ಗಂಗ್ಸ್ ಗ್ರ್ಯಾಂಡ್ ಮಾಸ್ಟರ್ಸ್, ಆಲ್ಪೈನ್ APL ಪೈಪರ್ಸ್ ತಂಡವನ್ನು ಸೋಲಿಸಿತು.
ಗಂಗ್ಸ್ ಗ್ರ್ಯಾಂಡ್ ಮಾಸ್ಟರ್ಸ್ ನ ಇಯಾನ್ ನೆಪೊಮ್ನಿಯಾಶ್ಚಿ ಅವರು ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಮಣಿಸುವ ಮೂಲಕ ತಂಡದ ಗೆಲುವಿನಲ್ಲಿ ನಿರ್ಣಾಯಕ ಕೊಡುಗೆ ನೀಡಿದರು. ಈ ಮೂಲಕ ಗಂಗ್ಸ್ ಗ್ರ್ಯಾಂಡ್‌ಮಾಸ್ಟರ್ಸ್ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿತು.
ಆಲ್ಪೈನ್ APL ಪೈಪರ್ಸ್ ಮತ್ತು ಗಂಗ್ಸ್ ಗ್ರ್ಯಾಂಡ್ ಮಾಸ್ಟರ್ಸ್ ತಲಾ 18 ಅಂಕಗಳೊಂದಿಗೆ ಅಂತಿಮ ಲೀಗ್ ಪಂದ್ಯವನ್ನು ಪ್ರವೇಶಿಸಿದ್ದವು.