ಐಸಿಸಿ ಟಿ20 ಆಲ್ರೌಂಡರ್ ರ‍್ಯಾಂಕಿಂಗ್ | ನೇಪಾಳದ ದೀಪೆಂದರ್ ಸಿಂಗ್ ಗೆ ಭಡ್ತಿ

Update: 2024-04-17 16:41 GMT

 ದೀಪೆಂದರ್ ಸಿಂಗ್ | PC : NDTV 

ಹೊಸದಿಲ್ಲಿ: ನೇಪಾಳದ ಆಲ್ರೌಂಡರ್ ದೀಪೆಂದರ್ ಸಿಂಗ್ ಹೊಸ ಐಸಿಸಿ ಟಿ20 ಆಟಗಾರರ ರ್ಯಾಂಕಿಂಗ್ ನಲ್ಲಿ ಗಣನೀಯ ಏರಿಕೆ ಕಂಡಿದ್ದಾರೆ.

ಖತರ್ ವಿರುದ್ಧದ ಎಸಿಸಿ ಪುರುಷರ ಟಿ20 ಪ್ರೀಮಿಯರ್ ಕಪ್ ಪಂದ್ಯದಲ್ಲಿ ಓವರ್ವೊಂದರಲ್ಲಿ ಆರು ಸಿಕ್ಸರ್ಗಳನ್ನು ಸಿಡಿಸಿ ಮಹತ್ವದ ಸಾಧನೆಯ ಮಾಡಿದ ಹಿನ್ನೆಲೆಯಲ್ಲಿ ದೀಪೆಂದರ್ ಟಿ20 ಆಲ್ರೌಂಡರ್ ರ್ಯಾಂಕಿಂಗ್ ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆಯುವತ್ತ ಸಾಗಿದ್ದಾರೆ.

ದೀಪೆಂದರ್ ಕೇವಲ 30 ಎಸೆತಗಳಲ್ಲಿ ಔಟಾಗದೆ 64 ರನ್ ಗಳಿಸಿದ್ದರು. ಕಮ್ರಾನ್ ಖಾನ್ ಎಸೆದ ಕೊನೆಯ ಓವರ್ನಲ್ಲಿ ಆರು ಸಿಕ್ಸರ್ ಸಿಡಿಸಿದ್ದರು. ಈ ಪಂದ್ಯವನ್ನು ನೇಪಾಳವು 32 ರನ್ನಿಂದ ಗೆದ್ದುಕೊಂಡಿತ್ತು. ಅಮೋಘ ಬ್ಯಾಟಿಂಗ್ ಮಾಡಿದ್ದ ದೀಪೆಂದರ್ ಟಿ20 ಬ್ಯಾಟರ್ ರ್ಯಾಂಕಿಂಗ್ ನಲ್ಲಿ 16 ಸ್ಥಾನ ಮೇಲಕ್ಕೇರಿ 61ನೇ ಸ್ಥಾನ ತಲುಪಿದ್ದಾರೆ.

ಅಷ್ಟೇ ಅಲ್ಲದೆ, ಟಿ20 ಆಲ್ರೌಂಡರ್ಗಳ ರ್ಯಾಂಕಿಂಗ್ ನಲ್ಲಿ 14 ಸ್ಥಾನ ಮೇಲಕ್ಕೇರಿ 11ನೇ ಸ್ಥಾನ ತಲುಪಿದ್ದಾರೆ.

ದೀಪೆಂದರ್ ಸಹ ಆಟಗಾರ ಆಸಿಫ್ ಶೇಕ್ ರ್ಯಾಂಕಿಂಗ್ ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. 22ರ ಹರೆಯದ ಆರಂಭಿಕ ಬ್ಯಾಟರ್ ಆಸಿಫ್ ಟಿ20 ಬ್ಯಾಟರ್ ರ್ಯಾಂಕಿಂಗ್ ನಲ್ಲಿ 36 ಸ್ಥಾನ ಮೇಲಕ್ಕೇರಿ 75ನೇ ಸ್ಥಾನ ತಲುಪಿದ್ದಾರೆ. ಟೂರ್ನಮೆಂಟ್ನಲ್ಲಿ ಮಲೇಶ್ಯ, ಖತರ್ ಹಾಗೂ ಹಾಂಕಾಂಗ್ ವಿರುದ್ಧ ಕ್ರಮವಾಗಿ 32, 52 ಹಾಗೂ 40 ರನ್ ಗಳಿಸಿದ್ದಾರೆ.

ನೇಪಾಳದ ಇನ್ನೋರ್ವ ಯುವ ಆಟಗಾರ ಕುಶಾಲ್ ಮಲ್ಲ ಟಿ20 ಆಲ್ರೌಂಡರ್ ರ್ಯಾಂಕಿಂಗ್ ನಲ್ಲಿ ಅಲೆ ಸೃಷ್ಟಿಸಿದ್ದಾರೆ. 20ರ ಹರೆಯದ ಮಲ್ಲ ಅವರು ಖತರ್ ವಿರುದ್ಧ 35 ರನ್ ಕೊಡುಗೆ ನೀಡಿದ್ದಲ್ಲದೆ, ವಿಕೆಟನ್ನು ಕಬಳಿಸಿದ್ದಾರೆ. ಹೊಸ ರ್ಯಾಂಕಿಂಗ್ ನಲ್ಲಿ ಐದು ಸ್ಥಾನ ಮೇಲಕ್ಕೇರಿ 27ನೇ ಸ್ಥಾನ ತಲುಪಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News