×
Ad

ಐಪಿಎಲ್ ನಿಂದ ಸಿ ಎಸ್‌ ಕೆ ನಿರ್ಗಗಮನ | ರಾಂಚಿಗೆ ವಾಪಾಸಾದ ಎಂ.ಎಸ್.ಧೋನಿ

Update: 2024-05-19 22:37 IST

Photo : x

ಹೊಸದಿಲ್ಲಿ : ಚೆನ್ನೈ ಸೂಪರ್ ಕಿಂಗ್ಸ್ ಪ್ರಸಕ್ತ ಐಪಿಎಲ್ ಟೂರ್ನಿಯಿಂದ ನಿರ್ಗಮಿಸಿದ ನಂತರ ಎಂ.ಎಸ್. ಧೋನಿ ರವಿವಾರ ತವರುಪಟ್ಟಣ ರಾಂಚಿಗೆ ವಾಪಸಾದರು.

ಬೆಂಗಳೂರಿನಲ್ಲಿ ಶನಿವಾರ ಆರ್‌ ಸಿ ಬಿ ವಿರುದ್ಧ ಸೋತಿರುವ ಸಿ ಎಸ್‌ ಕೆ ತನ್ನ ಐಪಿಎಲ್ ಅಭಿಯಾನ ಅಂತ್ಯಗೊಳಿಸಿತ್ತು.

ಧೋನಿ ಅವರು ರಾಂಚಿ ಏರ್ಪೋರ್ಟ್ ಗೆ ತಲುಪಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಿ ಎಸ್‌ ಕೆ ಮಾಜಿ ನಾಯಕ ಧೋನಿ ರಾಂಚಿಗೆ ಆಗಮಿಸಿದ ನಂತರ ಕಾರನ್ನು ಏರುತ್ತಿರುವ ದೃಶ್ಯ ವೀಡಿಯೊದಲ್ಲಿದೆ.

ಸಿ ಎಸ್‌ ಕೆಗೆ 5 ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲಲು ಕಾರಣರಾಗಿದ್ದ ಧೋನಿ ಆರ್‌ ಸಿ ಬಿ ವಿರುದ್ಧ ತನ್ನ ಕೊನೆಯ ಪಂದ್ಯ ಆಡಿದ್ದಾರೆಂದು ನಂಬಲಾಗಿದೆ. ತನ್ನ ಅಭಿಮಾನಿಗಳ ಬೆಂಬಲವನ್ನು ಪ್ರಶಂಸಿಸಿದ್ದ ಧೋನಿ ಇನ್ನೊಂದು ವರ್ಷ ಆಡುವುದಾಗಿ ಕಳೆದ ವರ್ಷ ಭರವಸೆ ನೀಡಿದ್ದರು.

ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಧೋನಿಯ ಕೆಲಸದ ಒತ್ತಡವನ್ನು ಸಿ ಎಸ್‌ ಕೆ ಎಚ್ಚರಿಕೆಯಿಂದ ನಿಭಾಯಿಸಿತ್ತು. ಪ್ರಸಕ್ತ ಐಪಿಎಲ್‌ ನಲ್ಲಿ ಕೆಳ ಸರದಿಯಲ್ಲಿ ಬ್ಯಾಟಿಂಗ್ ಮಾಡಿದ್ದ ಅವರು 73 ಎಸೆತಗಳನ್ನು ಎದುರಿಸಿದ್ದು 220ರ ಸ್ಟ್ರೈಕ್ ರೇಟ್ ನಲ್ಲಿ 14 ಬೌಂಡರಿ ಹಾಗೂ 13 ಸಿಕ್ಸರ್ ಗಳನ್ನು ಸಿಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News