×
Ad

ICC Test Rankings | ಬುಮ್ರಾ ಅಗ್ರಸ್ಥಾನದಲ್ಲಿ ಮುಂದುವರಿಕೆ

ಟಾಪ್ 10ರಲ್ಲಿ ಜೈಸ್ವಾಲ್, ಶುಭಮನ್ ಗಿಲ್

Update: 2026-05-13 21:50 IST

 ಜಸ್ಪ್ರೀತ್ ಬುಮ್ರಾ | Photo Credit : PTI  

ದುಬೈ: ಬುಧವಾರ ಪ್ರಕಟವಾದ ನೂತನ ಐಸಿಸಿ ಟೆಸ್ಟ್ ರ್ಯಾಂ ಕಿಂಗ್‌ ನಲ್ಲಿ ಭಾರತದ ಮುಂಚೂಣಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೌಲರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಬ್ಯಾಟರ್ ಗಳ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಕ್ರಮವಾಗಿ ಎಂಟು ಮತ್ತು ಒಂಭತ್ತನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ನ ಮಾಜಿ ನಾಯಕ ಜೋ ರೂಟ್ 880 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಜೈಸ್ವಾಲ್ 750 ಅಂಕಗಳನ್ನು ಹೊಂದಿದ್ದರೆ, ಒಂದು ಸ್ಥಾನ ಏರಿಕೆ ಕಂಡಿರುವ ಗಿಲ್ 730 ಅಂಕಗಳನ್ನು ಗಳಿಸಿದ್ದಾರೆ. ಹ್ಯಾರಿ ಬ್ರೂಕ್ ಎರಡನೇ ಸ್ಥಾನದಲ್ಲಿದ್ದು, ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ನಂತರದ ಸ್ಥಾನಗಳಲ್ಲಿದ್ದಾರೆ.

ನವೆಂಬರ್ನಲ್ಲಿ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ನಂತರ, ಭಾರತ ತಂಡವು 2026ರಲ್ಲಿ ಇನ್ನೂ ಯಾವುದೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯಗಳನ್ನು ಆಡಿಲ್ಲ.

ಬೌಲರ್ ಗಳ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ 879 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಮುಹಮ್ಮದ್ ಸಿರಾಜ್ 12ನೇ ಸ್ಥಾನದಲ್ಲಿದ್ದು, ಬುಮ್ರಾ ನಂತರದ ಉತ್ತಮ ರ್ಯಾಂ ಕಿಂಗ್ ನ ಭಾರತೀಯ ಬೌಲರ್ ಆಗಿದ್ದಾರೆ.

ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಕ್ರಮವಾಗಿ 14 ಮತ್ತು 15ನೇ ಸ್ಥಾನಗಳಲ್ಲಿದ್ದಾರೆ.

ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಮತ್ತು ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಕ್ರಮವಾಗಿ ಎರಡು ಮತ್ತು ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ನ್ಯೂಝಿಲೆಂಡ್ ನ ಮ್ಯಾಟ್ ಹೆನ್ರಿ ಕೂಡ ಜಿಗಿತ ಕಂಡು ಮೂರನೇ ಸ್ಥಾನಕ್ಕೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News