FIFA World Cup 2026 | ಟುನೀಶಿಯಾ ವಿರುದ್ಧ ಗೋಲು ಗಳಿಸಿದ ನಂತರ ಕ್ಷಮೆಕೋರಿದ ಯಾಸಿನ್!
ಯಾಸಿನ್ ಅಯಾರಿ | Photo Credit : @CaptainXos39864
ಮಾಂಟೆರ್ರಿ, ಜೂ. 15: ಸ್ವೀಡನ್ ತಂಡದ ಮಿಡ್ಫೀಲ್ಡರ್ ಯಾಸಿನ್ ಅಯಾರಿ ಟುನೀಶಿಯಾ ವಿರುದ್ಧ 5–1 ಗೆದ್ದ ಪಂದ್ಯದಲ್ಲಿ ಎರಡು ಬಾರಿ ಗೋಲು ಗಳಿಸಿದ್ದರು. ಮೊದಲ ಗೋಲು ಗಳಿಸಿದ ನಂತರ ಯಾಸಿನ್ ಅವರ ಸಂಭ್ರಮಾಚರಣೆಯು ಎಲ್ಲರ ಗಮನ ಸೆಳೆಯಿತು.
ಮೊದಲ ಗೋಲು ಗಳಿಸಿದ ನಂತರ 22ರ ಹರೆಯದ ಯಾಸಿನ್ ಅಬ್ಬರದ ಸಂಭ್ರಮಾಚರಣೆ ನಡೆಸುವ ಬದಲಿಗೆ ತನ್ನ ಎರಡು ಕೈಗಳನ್ನು ಮೇಲಕ್ಕೆತ್ತಿ ಕ್ಷಮೆಯಾಚಿಸಿದರು. ಈ ಸನ್ನೆಯು ತನ್ನ ತಂದೆಯ ಜನ್ಮಸ್ಥಳವಾದ ಟುನೀಶಿಯಾದ ಬಗ್ಗೆ ಗೌರವದ ಸಂಕೇತವಾಗಿತ್ತು.
ಯಾಸಿನ್ ಅವರು ಸ್ವೀಡನ್ ನ ಸೋಲ್ನಾದಲ್ಲಿ ಜನಿಸಿದ್ದರು. ಯೂತ್ ಮಟ್ಟದಲ್ಲಿ ಸ್ವೀಡನ್ ತಂಡವನ್ನು ಪ್ರತಿನಿಧಿಸಿದ್ದರೂ, 2022ರ ವಿಶ್ವಕಪ್ ಗಿಂತ ಮೊದಲು ಟುನೀಶಿಯಾದ ಪರ ಆಡಲು ಅವರಿಗೆ ಅವಕಾಶ ಲಭಿಸಿತ್ತು. ಆದರೆ ಅವರು ಸ್ವೀಡನ್ ತಂಡದೊಂದಿಗೆ ಮುಂದುವರಿಯಲು ನಿರ್ಧರಿಸಿದರು.
ಯಾಸಿನ್ ಅವರ ತಂದೆ ತನ್ನ ಮಗನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.
‘‘ನಾನು ಕೂಡ ಆತ ಸ್ವೀಡನ್ ಗಾಗಿ ಆಡಬೇಕೆಂದು ಬಯಸಿದ್ದೆ. ತನ್ನನ್ನು ಪೋಷಿಸಿದ ದೇಶಕ್ಕೆ ಏನಾದರೂ ಕೊಡುಗೆ ನೀಡುತ್ತೇನೆಂದು ಅವನಿಗೆ ಅನಿಸಬೇಕು’’ ಎಂದು ಎಝಾಝ್ ಅಯಾರಿ ಸ್ವೀಡನ್ನ ದಿನಪತ್ರಿಕೆಗೆ ಇತ್ತೀಚೆಗೆ ಹೇಳಿದ್ದರು.
Goal by Yasin Ayari that marked the night! O pic.twitter.com/Spha2JeT4f
— Kai! (@bagendary) June 15, 2026