ನಾಳೆ (ಜೂ.6) ಸಿಇಟಿ ಫಲಿತಾಂಶ ಪ್ರಕಟ
ಸಾಂದರ್ಭಿಕ ಚಿತ್ರ Image by DC Studio on Magnific
ಬೆಂಗಳೂರು : ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್‍ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿಇಟಿ) ಫಲಿತಾಂಶವನ್ನು ಜೂ.6ರ ಮಧ್ಯಾಹ್ನ 2 ಗಂಟೆ ನಂತರ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಶುಕ್ರವಾರ ಪ್ರಕಟನೆ ಹೊರಡಿಸಿರುವ ಅವರು, ಈ ವರ್ಷ ಸಿಇಟಿಗೆ 1,44,380 ಹುಡುಗರು, 1,86,099 ಹುಡುಗಿಯರು ಮತ್ತು 970 ವಿಶೇಷಚೇತನರು ಸೇರಿ ಒಟ್ಟು 3,30,479ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ಎ.23 ಮತ್ತು ಎ.24ರಂದು ರಾಜ್ಯದ 745 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿದ್ದು, ಈಗ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ ಎಂದಿದ್ದಾರೆ.
ವಿದ್ಯಾರ್ಥಿಗಳು https://keaonline.karnataka.gov.in/ugcet_2026_results/ ಅಥವಾ https://keaonline.karnataka.gov.in/ugcet_ 2026_result/ ಅಥವಾ https://cetonline.karnataka.gov.in/kea/ ಲಿಂಕ್‍ಗಳ ಮೂಲಕ ಫಲಿತಾಂಶ ಪಡೆಯಬಹುದು ಎಂದು ಅವರು ವಿವರಿಸಿದ್ದಾರೆ.
................