ಬೆಂಗಳೂರು : ಇಂದು ಸಂಜೆ ವೇಳೆಗೆ ನಿಗಮ-ಮಂಡಳಿಗಳ ನಾಮ ನಿರ್ದೇಶಕರ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾನು ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಗೆ ಸಹಿ ಮಾಡಿ ಬಂದಿದ್ದೇನೆ.‌ ಮೊದಲಿಗೆ ಇಂದು ನಿರ್ದೇಶಕರುಗಳ ಪಟ್ಟಿ ಬಿಡುಗಡೆಯಾಗಲಿದೆ. ಹಿರಿಯ ಶಾಸಕರುಗಳಿಗೂ ನಿಗಮಮಂಡಳಿಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದರು.

ಬೆಲೆ ಏರಿಕೆ ವಿರುದ್ಧ ಬಿಜೆಪಿಯವರು ಪ್ರತಿಭಟನೆ ಮಾಡುವ ಮುನ್ನ ಪೆಟ್ರೋಲ್ ಗೆ ಎಥನಾಲ್ ಮಿಕ್ಸ್ ಮಾಡಿ‌ ಕಲಬೆರಕೆ ಮಾಡುರುವ ಬಗ್ಗೆ ಮೊದಲು ಮಾತನಾಡಲಿ.  ಕೇಂದ್ರದ ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್, ಡೀಸೆಲ್ ಹೆಚ್ಚಳ ಮಾಡಿ  ಶೇ.30 ರಷ್ಟು ಎಥೆನಾಲ್ ಮಿಕ್ಸ್ ಮಾಡಿ ಎಲ್ಲಾ ಬಂಕ್ ಗಳಿಗೂ ಕಳುಹಿಸಿದ್ದಾರೆ. ಈ ಬಗ್ಗೆ ಸ್ಯಾಂಪಲ್ ಗಳನ್ನು ನಮ್ಮ ಸಚಿವರು ಪರೀಕ್ಷಿಸಿ ಕಲಬೆರಕೆಯಾಗಿರುವ ಬಗ್ಗೆ ಪತ್ತೆ ಹಚ್ಚಿದ್ದಾರೆ. ಇದರ ಬಗ್ಗೆ ಬಿಜೆಪಿಯವರು ಮಾತನಾಡಲಿ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor