×
Ad

ಕರ್ನಾಟಕ ಮೀಡಿಯಾ ಚಾಂಪಿಯನ್ಸ್ ಲೀಗ್ | 'ಟಿವಿ9 ತಂಡ' ಚಾಂಪಿಯನ್, ʼವಾರ್ತಾಭಾರತಿ ತಂಡʼ ರನ್ನರ್ಸ್‌ ಅಪ್

Update: 2026-06-29 01:18 IST

ಬೆಂಗಳೂರು : ಕರ್ನಾಟಕ ಮೀಡಿಯಾ ಚಾಂಪಿಯನ್ಸ್ ಲೀಗ್ (KMCL) 2026ರ ಫೈನಲ್ ಪಂದ್ಯದಲ್ಲಿ ಗೆದ್ದು ಟಿವಿ9 ತಂಡ ಚಾಂಪಿಯನ್ ಆಗಿದೆ. ಇಲ್ಲಿ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ 'ವಾರ್ತಾಭಾರತಿ' ತಂಡವನ್ನು ಸೋಲಿಸಿದ ಟಿವಿ9 ತಂಡವು ಪ್ರತಿಷ್ಠಿತ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಪಂದ್ಯಾವಳಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿ ಅಜೇಯವಾಗಿದ್ದ ವಾರ್ತಾಭಾರತಿ ತಂಡವು ಸೆಮಿಫೈನಲ್‌ನಲ್ಲಿ 'ಟೈಮ್ಸ್ ಆಫ್ ಇಂಡಿಯಾ' ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ, ಫೈನಲ್‌ನಲ್ಲಿ ಟಿವಿ9 ತಂಡದ ವಿರುದ್ಧ ವಾರ್ತಾಭಾರತಿ ತಂಡವು ಸೋಲನ್ನು ಅನುಭವಿಸಿತು.

ಮಾಧ್ಯಮ ವೃತ್ತಿಪರರಿಗಾಗಿ ಕರ್ನಾಟಕದ ಪ್ರಮುಖ ಕ್ರಿಕೆಟ್ ಟೂರ್ನಿಯಾಗಿ ಗುರುತಿಸಿಕೊಂಡಿರುವ ಕರ್ನಾಟಕ ಮೀಡಿಯಾ ಚಾಂಪಿಯನ್ಸ್ ಲೀಗ್ ಅನ್ನು ಹೈಪರ್ ಸ್ಪೋರ್ಟ್ಸ್ ಮತ್ತು ವೆಲ್ಫೇರ್ ಟ್ರಸ್ಟ್ ಆಯೋಜಿಸುತ್ತದೆ. ರಾಜ್ಯದ 24 ಪ್ರಮುಖ ಪತ್ರಿಕೆಗಳು ಹಾಗೂ ಟಿವಿ ಚಾನೆಲ್ ಸಹಿತ ಇತರ ಮಾಧ್ಯಮ ಸಂಸ್ಥೆಗಳ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಿದ್ದವು.

ಪಂದ್ಯಾವಳಿಯ ಮೊದಲ ಹಂತವನ್ನು 2026ರ ಮಾರ್ಚ್‌ನಲ್ಲಿ ಆಯೋಜಿಸಲಾಗಿತ್ತು. ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ನಾಕೌಟ್ ಹಂತದ ಪಂದ್ಯಗಳನ್ನು ಜೂನ್ 27 ಮತ್ತು 28ರಂದು ಬೆಂಗಳೂರಿನಲ್ಲಿ ನಡೆಸಲಾಯಿತು.

ಪತ್ರಕರ್ತರು ಮತ್ತು ಮಾಧ್ಯಮ ವೃತ್ತಿಪರರಲ್ಲಿ ಕ್ರೀಡಾ ಮನೋಭಾವ ಹಾಗೂ ಪರಸ್ಪರ ಸೌಹಾರ್ದತೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾದ ಈ ಬಾರಿಯ ಟೂರ್ನಿಯು, ಗರ್ಭಕಂಠದ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದು ಮತ್ತು ಕರ್ನಾಟಕದಾದ್ಯಂತ ಎಚ್‌ಪಿವಿ (HPV) ಲಸಿಕೆ ಕುರಿತು ಅರಿವು ಹೆಚ್ಚಿಸುವ ಅಭಿಯಾನಕ್ಕೂ ಸಮರ್ಪಿತವಾಗಿತ್ತು.

                                                                       'ವಾರ್ತಾಭಾರತಿ' ತಂಡ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News