×
Ad

Kolara | ಟ್ರ್ಯಾಕ್ಟರ್ ಢಿಕ್ಕಿ: ಬೈಕಿನಲ್ಲಿದ್ದ ತಂದೆ-ತಾಯಿ, ಮಗಳು ಮೃತ್ಯು

Update: 2026-06-28 10:28 IST

ಕೋಲಾರ: ಟ್ರ್ಯಾಕ್ಟರ್ ಢಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿ ತೆರಳುತ್ತಿದ್ದ ದಂಪತಿ ಹಾಗೂ ಪುತ್ರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮುಳಬಾಗಿಲು ತಾಲೂಕಿನ ವಿ. ಗುಟ್ಟಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದೆ.

ಎನ್.ಚಮಕಲಹಳ್ಳಿ ಗ್ರಾಮದ ನಿವಾಸಿ ಅಬೂಬಕರ್(38), ಪತ್ನಿ ಸಾಬೀರಾ(37), ಪುತ್ರಿ ಝೋಯಾ(16) ಮೃತಪಟ್ಟವರು.

ಕಲ್ಲು ಕೆಲಸಕ್ಕೆ ತೆರಳಿದ್ದ ಇವರು ಶನಿವಾರ ಸಂಜೆ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News