×
Ad

ಕರ್ನಾಟಕ ನಾಟಕ ಅಕಾಡೆಮಿ | ಶಶಿಧರ ಅಡಪಗೆ ʼಜೀವಮಾನ ಸಾಧನೆ ಪ್ರಶಸ್ತಿʼ

Update: 2025-07-24 17:56 IST

ಜಿ.ಎನ್.ಮೋಹನ್/ಶಶಿಧರ ಅಡಪ ಬಿ./ ಸುಗಂಧಿ ಉಮೇಶ್ ಕಲ್ಮಾಡಿ

ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿಯು 2025-26ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಶಶಿಧರ ಅಡಪ ಬಿ. ಅವರು ʼಜೀವಮಾನ ಸಾಧನೆ ಗೌರವ ಪ್ರಶಸ್ತಿʼಗೆ ಭಾಜನರಾಗಿದ್ದಾರೆ.

ಪತ್ರಕರ್ತ, ಲೇಖಕ ಜಿ.ಎನ್.ಮೋಹನ್, ಸುಗಂಧಿ ಉಮೇಶ್ ಕಲ್ಮಾಡಿ ಸೇರಿದಂತೆ 25 ಸಾಧಕರು ʼವಾರ್ಷಿಕ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ವಾರ್ಷಿಕ ಪ್ರಶಸ್ತಿ ಪುರಸ್ಕೃತರು : ಜಿ.ಎನ್.ಮೋಹನ್, ಮಾಲತೇಶ ಬಡಿಗೇರ, ಟಿ. ರಘು, ವೆಂಕಟಾಚಲ, ಮುರ್ತುಜಸಾಬ ಘಟ್ಟಿಗನೂರ, ಚೆನ್ನಕೇಶವಮೂರ್ತಿ ಎಂ., ಗೋಪಾಲ ಯಲ್ಲಪ್ಪ ಉಣಕಲ್, ಚಿಕ್ಕಪ್ಪಯ್ಯ, ದೇವರಾಜ ಹಲಗೇರಿ, ವೈ.ಎಸ್. ಸಿದ್ಧರಾಮೇಗೌಡ, ಅರುಣ್‍ಕುಮಾರ್ ಆರ್.ಟಿ, ರೋಹಿಣಿ ರಘುನಂದನ್, ರತ್ನ ಸಕಲೇಶಪುರ, ವಿ.ಎನ್.ಅಶ್ವಥ್, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಕೆ.ಆರ್.ಪೂರ್ಣೇಂದ್ರ ಶೇಖರ್, ಭೀಮನಗೌಡ ಬಿ. ಕಟಾವಿ, ಕೆ. ಮುರಳಿ, ಮುತ್ತುರಾಜ್, ಮಲ್ಲೇಶ್ ಬಿ. ಕೋನಾಳ, ಸುಗಂಧಿ ಉಮೇಶ್ ಕಲ್ಮಾಡಿ, ಮಹೇಶ ವಿ. ಪಾಟೀಲ, ಶಿವಪುತ್ರಪ್ಪ ಶಿವಸಿಂಪಿ, ಸದ್ಯೋಜಾತ ಶಾಸ್ತ್ರಿ ಹಿರೇಮಠ್‌, ಡಾ. ಉದಯ್ ಎಸ್.ಆರ್. (ಸೋಸಲೆ) ಅವರು ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

7 ಮಂದಿಗೆ ವಿವಿಧ ದತ್ತಿ ಪುರಸ್ಕಾರ :

2024-25ನೇ ಸಾಲಿನ ಬಾಕಿಯಿರುವ ವಾರ್ಷಿಕ ಪ್ರಶಸ್ತಿಗೆ ಶಂಕರ್ ಭಟ್, ಎಚ್.ವಿ. ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರಕ್ಕೆ ಮಂಜಪ್ಪ ಪಿ.ಎ, ಬಿ.ಆರ್.ಅರಿಶಿಣಕೋಡಿ ದತ್ತಿ ಪುರಸ್ಕಾರಕ್ಕೆ ಕಿರಣ್ ರತ್ನಾಕರ ನಾಯ್ಕ, ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರಕ್ಕೆ ಸಿ.ವಿ.ಲೋಕೇಶ, ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರಕ್ಕೆ ಎಚ್.ಪಿ.ಈಶ್ವರಾಚಾರಿ, ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರಕ್ಕೆ ದೊಡ್ಡಮನೆ ವೆಂಕಟೇಶ್, ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರಕ್ಕೆ ಪಿ.ವಿ.ಕೃಷ್ಣಪ್ಪ, ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರಕ್ಕೆ ನಾಗೇಂದ್ರ ಪ್ರಸಾದ್ ಅವರು ಆಯ್ಕೆಯಾಗಿದ್ದಾರೆ.

ಜೀವಮಾನ ಸಾಧನೆ ಪ್ರಶಸ್ತಿಯು 50 ಸಾವಿರ ರೂ. ನಗದು, ವಾರ್ಷಿಕ ಪ್ರಶಸ್ತಿ 25 ಸಾವಿರ ರೂ. ನಗದು, ವಿವಿಧ ದತ್ತಿನಿಧಿ ಪುರಸ್ಕಾರಗಳು 15 ಸಾವಿರ ರೂ. ನಗದು, ಶಾಲು, ಫಲ-ತಾಂಬೂಲ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷ ಡಾ.ಕೆ.ವಿ. ನಾಗರಾಜಮೂರ್ತಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News