Photo Credit : PTI 

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯ ಅಂತಿಮ ಮತದಾರರ ಪಟ್ಟಿ ನಾಳೆ (ಅ.27) ಪ್ರಕಟವಾಗಲಿದೆ.

ಎಸ್‍ಐಆರ್ ಆರಂಭಕ್ಕೂ ಮುನ್ನ ರಾಜ್ಯದಲ್ಲಿ 2026ರ ಜೂ.16ರ ವೇಳೆಗೆ 5,54,32,314 ಮತದಾರರಿದ್ದರು. ಈ ಪೈಕಿ 1,07,96,339 ಮಂದಿಯನ್ನು ಗೈರು, ಸ್ಥಳಾಂತರ, ಮೃತ, ನಕಲಿ ಹಾಗೂ ಇತರೆ(ಎಎಸ್‍ಡಿಡಿಒ) ವರ್ಗಗಳಡಿ ಗುರುತಿಸಲಾಗಿದೆ. ಆ.24ರಂದು ಪ್ರಕಟವಾದ ಕರಡುಪಟ್ಟಿಯಲ್ಲಿ 4,46,35,975 ಮತದಾರರ ಹೆಸರುಗಳಿದ್ದವು.

ಮತದಾರರ ವಿವರಗಳಲ್ಲಿನ ತಾರ್ಕಿಕ ವ್ಯತ್ಯಾಸ ಮತ್ತು ಮ್ಯಾಪಿಂಗ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ 43,82,824 ನೋಟಿಸ್‍ಗಳನ್ನು ನೀಡಲಾಗಿತ್ತು. ಜೂ.16ರಿಂದ ಅ.23ರ ವರೆಗೆ ಹೊಸ ಮತದಾರರ ನೋಂದಣಿಗೆ 10,42,863 ನಮೂನೆ-6, ವಿದೇಶಿ ಮತದಾರರ ನೋಂದಣಿಗೆ 4,840 ನಮೂನೆ-6ಎ, ಹೆಸರು ಅಳಿಸುವಿಕೆಗಾಗಿ 2,28,917 ನಮೂನೆ-7 ಹಾಗೂ ತಿದ್ದುಪಡಿಗಾಗಿ 13,10,841 ನಮೂನೆ-8 ಅರ್ಜಿಗಳು ಸ್ವೀಕೃತವಾಗಿವೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor