ರಾಷ್ಟ್ರೀಯ ಮತದಾರರ ದಿನ : ಚುನಾವಣೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ 29 ಅಧಿಕಾರಿಗಳಿಗೆ ರಾಜ್ಯಮಟ್ಟದ ಪ್ರಶಸ್ತಿ
ಸಾಂದರ್ಭಿಕ ಚಿತ್ರ | Photo: PTI
ಬೆಂಗಳೂರು: ರಾಷ್ಟ್ರೀಯ ಮತದಾರರ ದಿನವನ್ನು ಪ್ರತಿವರ್ಷದಂತೆ ಈ ವರ್ಷವು ಆಚಾರಣೆ ಮಾಡಲಾಗುತ್ತಿದ್ದು, ಚುನಾವಣೆ ಸಂಬಂಧಿತ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ 29 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜಿಲ್ಲಾ ಚುನಾವಣಾ ಅಧಿಕಾರಿ ವಿಭಾಗದಲ್ಲಿ ಗದಗ ಜಿಲ್ಲಾ ಚುನಾವಣಾ ಅಧಿಕಾರಿ ವೈಶಾಲಿ ಎಂ.ಎಲ್., ಬಳ್ಳಾರಿ ಜಿಲ್ಲೆಯ ಪವನ್ ಕುಮಾರ್ ಮಲಪತಿ, ಚಿಕ್ಕಮಗಳೂರು ಜಿಲ್ಲೆಯ ಕೆ.ಎನ್. ರಮೇಶ್, ಕೋಲಾರ ಜಿಲ್ಲೆಯ ವೆಂಕಟ್ ರಾಜ ಪ್ರಶಸ್ತಿಗೆ ಆಯ್ಕೆಗೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ವಿಭಾಗದಲ್ಲಿ ಯಾದಗಿರಿ ಜಿಲ್ಲೆಯ ಗರೀಮಾ ಪಾನ್ವರ್, ರಾಯಚೂರು ಜಿಲ್ಲೆಯ ಶಶಿಧರ್ ಕುರೇರಾ, ಉತ್ತರ ಕನ್ನಡದ ಜಿಲ್ಲೆಯ ಈಶ್ವರ್ ಕುಮಾರ್ ಕಂಡೂ, ದಾವಣಗೆರೆ ಜಿಲ್ಲೆಯ ಸುರೇಶ್ ಬಿ ಇಟ್ನಾಳ್, ಮಂಡ್ಯ ಜಿಲ್ಲೆಯ ಶೇಕ್ ತನ್ವೀರ್ ಆಸೀಫ್ ಆಯ್ಕೆಯಾಗಿದ್ದಾರೆ.
ಚುನಾವಣಾ ನೋಂದಣಿ ಅಧಿಕಾರಿ ವಿಭಾಗದಲ್ಲಿ ತುಮಕೂರು ಜಿಲ್ಲೆಯ ರಿಶಿ ಆನಂದ್, ಚಾಮರಾಜನಗರದ ಮಹೇಶ್ ಬಿ.ಆರ್., ಬಾಗಲಕೋಟೆಯ ಶ್ವೇತಾ ಮೋಹನ್ ಬೀಡಿಕರ್, ಯಾದಗಿರಿಯ ಹಂಪಣ್ಣ ಸಜ್ಜನ್ ಆಯ್ಕೆಯಾಗಿದ್ದಾರೆ. ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣಾ ನೋಂದಣಿ ಅಧಿಕಾರಿ ಪ್ರದೀಪ್ ಕುರ್ದೆಕರ್, ಬೆಳಗಾವಿಯ ಬಸವರಾಜ್ ನಾಗರಾಳ್, ಗುಲ್ಬರ್ಗದ ಯಲಪ್ಪ ಸುಬೇದಾರ್, ಶಿವಮೊಗ್ಗದ ಹುಸೇನ್‍ಸಾಬ್ ಸರಕಾವಸ್ ಆಯ್ಕೆಯಾಗಿದ್ದಾರೆ.
ಬೂತ್ ಮಟ್ಟದ ಅಧಿಕಾರಿ ವಿಭಾಗದಲ್ಲಿ ದಾವಣಗೆರೆಯ ಸಹಾಯಕ ಶಿಕ್ಷಕ ಎಂ.ಕೊಟ್ರೇಶಪ್ಪ, ಮೈಸೂರಿನ ಆಶಾ ಕಾರ್ಯಕರ್ತೆ ಅಂಜನಾ, ರಾಮನಗರದ ಅಂಗನವಾಡಿ ಕಾರ್ಯಕರ್ತೆ ಮುಮ್ತಾಜ್ ಉನ್ನಿಸಾ, ರಾಯಚೂರಿನ ಮುಖ್ಯ ಶಿಕ್ಷಕ ಗಾಫೂರ್ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ ವಿಭಾಗದಲ್ಲಿ ಬೀದರ್ ನ ಮುಖ್ಯ ಪಶುವೈದ್ಯಾಧಿಕಾರಿ ಡಾ. ಗೌತಮ್ ಅರಳಿ, ಉಡುಪಿಯ ಹಿರಿಯ ಉಪನ್ಯಾಸಕ ಅಶೋಕಾ ಕಾಮತ್, ಶಿವಮೊಗ್ಗದ ಬ್ಲಾಕ್ ರಿಸೋರ್ಸ್ ಪರ್ಸನ್ ನಾವೀದ್ ಅಹ್‍ಮದ್ ಪೆರ್ವೀಝ್, ವಿಜಯಪುರದ ಉಪನ್ಯಾಸಕ ಅಶೋಕ್ ಲಿಮ್ಕರ್ ಆಯ್ಕೆಯಾಗಿದ್ದಾರೆ.
ಎಲೆಕ್ಟ್ರೋರಲ್ ಲಿಟೆರೆಸಿ ಕ್ಲಬ್ಸ್ ವಿಭಾಗದಲ್ಲಿ ಕೋಲಾರದ ಮಹಿಳೆಯರ ಸರಕಾರಿ ಪ್ರಥಮ ದರ್ಜೆ ಕಾಲೇಜು, ದಾರವಾಡದ ಸರಕಾರಿ ಪಿಯು ಕಾಲೇಜ್, ವಿಜಯಪುರದ ಎಸ್‍ಎಸ್‍ಬಿಎಚ್. ಸರಕಾರಿ ಪ್ರೌಢಶಾಲೆ ಹೀರೇಕುಲಚಿ, ಚಿಕ್ಕಮಗಳೂರಿನ ನಳಂದ ಇಂಗ್ಲೀಷ್ ಮೀಡಿಯಂ ಹೈ ಸ್ಕೂಲ್ ಮೂಡಿಗೆರೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ವರ್ಷ ಜ.25ರಂದು ಇಲ್ಲಿನ ಟೌನ್‍ಹಾಲ್‍ನಲ್ಲಿ ‘ಮತದಾನಕ್ಕಿಂತ ಇನ್ನೊಂಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಧ್ಯೇಯವಾಕ್ಯದೊಂದಿಗೆ ಮತದಾರರ ದಿನಾಚಾರಣೆ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.