ಪೊಲೀಸ್, ಗೃಹರಕ್ಷಕರ ಸಹಿತ 14 ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿ ಪದಕ
ಬೆಂಗಳೂರು, ಆ.14: 78ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ ಶ್ಲಾಘನೀಯ ಸೇವಾ ಪದಕ ಪ್ರಶಸ್ತಿಗಳನ್ನು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ. ಅದರಂತೆ ರಾಜ್ಯದ ಇಬ್ಬರು ಅಧಿಕಾರಿಗಳು ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಪೊಲೀಸ್, ಗೃಹರಕ್ಷಕ, ಸೇರಿದಂತೆ ಒಟ್ಟು 24 ಅಧಿಕಾರಿ, ಸಿಬ್ಬಂದಿಯು ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಪದಕ ಪ್ರದಾನ ಮಾಡಲಾಗುತ್ತದೆ.
ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ:
ಎಂ. ಚಂದ್ರಶೇಖರ್ - ಎಡಿಜಿಪಿ
ಬಸವಲಿಂಗಪ್ಪ ಕೆ.ಬಿ. - ಸೀನಿಯರ್ ಕಮಾಂಡರ್, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆ
ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ:
ಶ್ರೀನಾಥ್ ಮಹಾದೇವ್ ಜೋಶಿ - ಎಸ್ಪಿ
ಸಿ.ಕೆ. ಬಾಬಾ - ಡಿಸಿಪಿ
ರಾಮಗೊಂಡ ಭೈರಪ್ಪ ಬಸರಗಿ - ಎಎಸ್ಪಿ
ಗಿರಿ ಕೃಷ್ಣಮೂರ್ತಿ ಸಿ. - ಡಿಎಸ್ಪಿ
ಪಿ.ಮುರುಳೀಧರ್ - ಡಿಎಸ್ಪಿ
ಬಸವೇಶ್ವರ - ಅಸಿಸ್ಟೆಂಟ್ ಡೈರೆಕ್ಟರ್
ಬಸವರಾಜ್ ಕಮ್ತಾನೆ - ಡಿಎಸ್ಪಿ
ಮಹೇಶ್ ಎನ್. - ಅಸಿಸ್ಟೆಂಟ್ ಡೈರೆಕ್ಟರ್
ರವೀಶ್ ಎಸ್. ನಾಯಕ್ - ಎಸಿಪಿ
ಶರತ್ ದಾಸಣ್ಣ ಗೌಡ ಮಲ್ಗಾರ್ - ಎಸ್ಪಿ
ಪ್ರಭಾಕರ್ ಗೋವಿಂದಪ್ಪ - ಎಸಿಪಿ
ಗೋಪಾಲರೆಡ್ಡಿ ವಿ.ಸಿ. - ಡಿಸಿಪಿ
ಬಿ. ವಿಜಯ್ ಕುಮಾರ್ - ಹೆಡ್ ಕಾನ್ಸ್ಟೇಬಲ್
ಮಂಜುನಾಥ ಶೇಕಪ್ಪ ಕಲ್ಲೇದೇವರ್ - ಸಬ್ ಇನ್ಸ್ಪೆಕ್ಟರ್
ಹರೀಶ್ ಎಚ್.ಆರ್. - ಅಸಿಸ್ಟೆಂಟ್ ಕಮಾಂಡೆಂಟ್
ಎಸ್. ಮಂಜುನಾಥ್ - ಇನ್ಸ್ಪೆಕ್ಟರ್
ಮೆಹಬೂಬ್ ಸಾಹೇಬ್ ಮುಝಾವರ್ - ಹೆಡ್ ಕಾನ್ಸ್ಟೇಬಲ್
ಗೌರಮ್ಮ ಜಿ. - ಎಎಸ್ಐ
ಗೃಹ ರಕ್ಷಕದಳ ಮತ್ತು ನಾಗರಿಕ ರಕ್ಷಣೆ:
ವಿಜಯ್ ಕುಮಾರ್ ಎನ್. - ಕಂಪನಿ ಕಮಾಂಡರ್
ರೇವಣ್ಣಪ್ಪ ಬಿ. - ಪ್ಲಟೂನ್ ಕಮಾಂಡರ್
ಸತೀಶ್ ಯಲ್ಲನ್ಸ ಇರಕಲ್ - ಸ್ಟಾಫ್ ಆಫೀಸರ್
ಡಾ.ಮುರಳಿ ಮೋಹನ್ ಚೂಂತಾರು - ಕಮಾಂಡೆಂಟ್