×
Ad

ಮಹಿಳೆಯಿಂದ ದೇಶ ಸುಭದ್ರ: ಶ್ರೀಲತಾ ಸುರೇಶ್ ಶೆಟ್ಟಿ

Update: 2026-03-09 20:08 IST

ಕೋಟ, ಮಾ.9: ದೇಶ ಮಹಿಳೆಯರಿಂದ ಸುಭದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕೆ ಇತ್ತೀಚಿಗಿನ ಕೆಲ ಹುದ್ದೆ ಗಳನ್ನು ಅಲಂಕೃರಿಸಿದ ಮಹಿಳಾ ಮಣಿಗಳ ಕಾರ್ಯವೈಕರಿಯೇ ಸಾಕ್ಷಿ ಎಂದು ಉಡುಪಿ ಜಿಪಂ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಹೇಳಿದ್ದಾರೆ.

ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲ ಇವರ ಮಾರ್ಗದರ್ಶನ ದಲ್ಲಿ ಸ್ನೇಹಕೂಟ ಮಣೂರು ಇವರ ಸಹಯೋಗದೊಂದಿಗೆ ಸೋಮವಾರ ಕೋಟದ ಸಮುದ್ಯತಾ ಬ್ಯಾಂಕೇಟ್ ಹಾಲ್‌ನಲ್ಲಿ ಆಯೋಜಿಸಲಾದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಅಭಿನಂದನಾ ನುಡಿಗಳನ್ನಾಡಿದ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಸುಲತಾ ಎಸ್.ಹೆಗ್ಡೆ, ಮಹಿಳೆ ಇಂದು ಬಹು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾಳೆ. ಸಾಮಾಜಿಕ ಕಾರ್ಯದಲ್ಲಿ ಪುರುಷರಂತೆ ಮಹಿಳೆ ಕೂಡಾ ಮುಂಚೂಣಿಯ ಹೆಜ್ಜೆ ಇರಿಸಿದ್ದಾಳೆ. ಇಂತಹ ಸಂದರ್ಭದಲ್ಲಿ ಲೀಲಾವತಿ ಎಂಬ ಮಹಿಳಾ ಸಾಧಕಿಯನ್ನು ಗುರುತಿಸುವ ಪಂಚವರ್ಣ ಮಹಿಳಾ ಮಂಡಲಕ್ಕೆ ಪ್ರತಿಮಹಿಳೆ ಬೆಂಬಲ ಇದ್ದೆ ಇರುತ್ತದೆ ಎಂದರು.

ಈ ಸಂದರ್ಭದಲ್ಲಿ ಪಂಚವರ್ಣ ಸಾಧಕ ಮಹಿಳಾ ಪುರಸ್ಕಾರವನ್ನು ಪಾಂಡೇಶ್ವರ ಲೀಲಾವತಿ ಗಂಗಾಧರ ಪೂಜಾರಿ ಇವರಿಗೆ ಪ್ರದಾನ ಮಾಡಲಾಯಿತು. ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು. ಕಾರ್ಯಕ್ರಮವನ್ನು ಸ್ನೇಹಕೂಟ ಮಣೂರು ಅಧ್ಯಕ್ಷೆ ಭಾರತಿ ವಿ.ಮಯ್ಯ ಉದ್ಘಾಟಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಸಾಸ್ತಾನ ಮಹಿಳಾ ಮಂಡಲದ ಅಧ್ಯಕ್ಷೆ ಸುಮಿತ್ರಾ ಸುಧಾಕರ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸದಸ್ಯೆ ಜಯಂತಿ ಕೋಟ್ಯಾನ್ ಪ್ರಾರ್ಥಿಸಿದರು. ಸ್ನೇಹಕೂಟದ ವಿನಯ ಉಡುಪ ಸನ್ಮಾನ ಪತ್ರ ವಾಚಿಸಿದರು. ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು. ದಿನೇಶ್ ಆಚಾರ್, ಪುಷ್ಭ ಹಂದಟ್ಟು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News