×
Ad

ಕಾರ್ಕಳ: ಸಿಡಿಲು ಬಡಿದು ವ್ಯಕ್ತಿಗೆ ಗಾಯ

Update: 2026-05-13 22:22 IST

ಉಡುಪಿ, ಮೇ 13: ಮಂಗಳವಾರ ರಾತ್ರಿ ಗಾಳಿ ಮಳೆಯೊಂದಿಗೆ ಬಡಿಲಿಗೆ ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದಲ್ಲಿ ವ್ಯಕ್ತಿ ಯೊಬ್ಬರು ಗಾಯಗೊಂಡಿದ್ದಾರೆ.

ಎರ್ಲಪಾಡಿಯ ಶೇಖರ್ ಎಂಬವರೇ ಗಸಿಡಿಲಿನಿಂದ ಗಾಯಗೊಂಡವರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಾರ್ಕಳ ತಹಶೀಲ್ದಾರ್ ತಿಳಿಸಿದ್ದಾರೆ.

ಉಳಿದಂತೆ ಹೆಬ್ರಿ ತಾಲೂಕು ನಾಡ್ಪಾಲಿನ ಸೋಮನಿಥ ನಾಯ್ಕ್ ಎಂಬವರ ಮನೆ ಗಾಳಿ ಮಳೆಗೆ ಭಾಗಶಃ ಹಾನಿಗೊಂಡಿದ್ದು 25,000 ರೂ. ನಷ್ಟದ ಅಂದಾಜು ಮಾಡಲಾಗಿದೆ‌. ಉಡುಪಿ ಜಿಲ್ಲೆಯಲ್ಲಿ 8.2ಮಮಿ.ಮೀ ಮಳೆಯಾಗಿದೆ. ಹೆಬ್ರಿಯಲ್ಲಿ 23.3, ಕಾಪುವಲ್ಲಿ 19.8, ಉಡುಪಿಯಲ್ಲಿ 18.2ಮಿಮೀ ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News