×
Ad

ರೈಲು ಢಿಕ್ಕಿ ಹೊಡೆದು ಅಪರಿಚಿತ ಮೃತ್ಯು

Update: 2026-06-03 21:57 IST

ಬೈಂದೂರು, ಜೂ.3: ಕಂಬದಕೋಣೆ ಗ್ರಾಮದ ಹರ್ಕೇರಿ ಎಂಬಲ್ಲಿ ಕೊಂಕಣ ರೈಲ್ವೆ ಹಳಿಯ ಬಳಿ ಗಿಡ ಗಂಟೆಗಳ ಪೊದೆಯಲ್ಲಿ ಸುಮಾರು 40ರಿಂದ 45 ವರ್ಷ ಪ್ರಾಯದ ಅಪರಿಚಿತ ಗಂಡಸ್ಸಿನ ಮೃತದೇಹ ಪತ್ತೆಯಾಗಿದೆ.

ಈ ವ್ಯಕ್ತಿ ಜೂ.2ರಂದು ರಾತ್ರಿಯಿಂದ ಜೂ.3ರ ಬೆಳಗ್ಗಿನ ಮಧ್ಯಾವಧಿ ಯಲ್ಲಿ ರೈಲ್ವೆ ಹಳ್ಳಿಯಲ್ಲಿ ನಡೆದುಕೊಂಡು ಹೋಗುವಾಗ ಯಾವುದೋ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News