×
Ad

ಅವಧಿ ಮೀರಿ ವ್ಯವಹಾರ: ಹೊಟೇಲ್ ಮಾಲಕರ ವಿರುದ್ಧ ಪ್ರಕರಣ ದಾಖಲು

Update: 2026-06-03 22:10 IST

ಮಣಿಪಾಲ, ಜೂ.3: ಅವಧಿ ಮೀರಿ ಹೊಟೇಲ್‌ನಲ್ಲಿ ವ್ಯವಹಾರ ಮಾಡುತ್ತಿದ್ದ ಮಾಲಕನ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಸಿ ಕಚೇರಿ ರಸ್ತೆಯಲ್ಲಿರುವ ಸ್ಪೈಸ್ ಆ್ಯಂಡ್ ಐಸ್ ಹೋಟೆಲ್‌ನವರು ಅವಧಿ ಮೀರಿ ಗಿರಾಕಿಗಳಿಗೆ ಸರ್ವಿಸ್ ಮತ್ತು ಪಾರ್ಸೆಲ್ ನೀಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ತೆರಳಿ, ಹೋಟೇಲು ಮುಚ್ಚಿಸಿದ್ದಾರೆ. ಹೋಟೇಲ್‌ನ ವ್ಯವಸ್ಥಾಪಕರಿಗೆ ಈಗಾಗಲೇ ಹಲವಾರು ಬಾರಿ ಮೌಖಿಕವಾಗಿ ಹೊಟೇಲನ್ನು ಸರಿಯಾದ ಸಮಯಕ್ಕೆ ಬಂದ್ ಮಾಡಲು ತಿಳಿಸಿದ್ದರೂ ಹೋಟೇಲ್ ವ್ಯವಸ್ಥಾಪಕರು ಯಾವುದೇ ಪರವಾನಿಗೆ ಪಡೆಯದೇ ಅವಧಿ ಮೀರಿ ಹೋಟೇಲಿನಲ್ಲಿ ವ್ಯವಹಾರ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರ ನೆಮ್ಮದಿಗೆ ಭಂಗವುಂಟು ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News