ಕೋಳಿ ಅಂಕ: ಮೂವರ ಬಂಧನ
Update: 2026-06-19 22:05 IST
ಕುಂದಾಪುರ, ಜೂ.19: ಅಂಪಾರು ಗ್ರಾಮದ ಗುಡಿಬೆಟ್ಟು ಎಂಬಲ್ಲಿ ಜೂ.18ರಂದು ಕೋಳಿ ಅಂಕಕ್ಕೆ ದಾಳಿ ನಡೆಸಿದ ಕುಂದಾಪುರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮೊವಾಡಿಯ ನಾರಾಯಣ(48), ಉಡುಪಿ ನಿಟ್ಟೂರಿನ ಪ್ರಶಾಂತ್ (43), ನಿಟ್ಟೂರು ವಿಷ್ಣುಮೂರ್ತಿ ನಗರದ ನವರಾಜ್(51) ಬಂಧಿತ ಆರೋಪಿಗಳು. ಉಳಿದವರು ಹಾಡಿಯಲ್ಲಿ ಓಡಿ ತಪ್ಪಿಸಿಕೊಂಡಿದ್ದಾರೆ. ಬಂಧಿತರಿಂದ 1,600ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.