ಉಡುಪಿ: ರಿಕ್ಷಾ ಚಾಲಕ ಆತ್ಮಹತ್ಯೆ
Update: 2026-07-23 21:39 IST
ಉಡುಪಿ, ಜು.23: ಆದಿಉಡುಪಿಯ ಮಧ್ವನಗರದಲ್ಲಿ ರಿಕ್ಷಾ ಚಾಲಕರೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಮೃತರನ್ನು ಆದಿಉಡುಪಿ ರಿಕ್ಷಾ ನಿಲ್ದಾಣದ ಸದಸ್ಯ ಸುರೇಂದ್ರ ಮಧ್ವನಗರ (42) ಎಂದು ಗುರುತಿಸಲಾಗಿದೆ. ಸರಳ ಸ್ವಭಾವದವರಾಗಿದ್ದ ಸುರೇಂದ್ರ ಸುಮಾರು ಒಂದು ವಾರದ ಹಿಂದಷ್ಟೇ ಹೊಸ ರಿಕ್ಷಾವನ್ನು ಖರೀದಿಸಿದ್ದರು. ಬುಧವಾರ ತಡರಾತ್ರಿ ಕುಟುಂಬದವರು ಮಲಗಿದ್ದ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.