ಜು.24ರಂದು ಮಡಗಾಂವ್ ನಿಲ್ದಾಣದಲ್ಲಿ ಫುಟ್‌ಬ್ರಿಜ್ ತೆರವು; ರೈಲುಗಳ ಸಂಚಾರದಲ್ಲಿ ವ್ಯತ್ಯಯ
Update: 2026-07-23 21:32 IST
ಉಡುಪಿ, ಜು.23: ಮಡಗಾಂವ್‌ನ ಕೊಂಕಣ ರೈಲು ನಿಲ್ದಾಣದಲ್ಲಿ ಜು.24ರ ಶುಕ್ರವಾರ ಅಪರಾಹ್ನ 12:50ರಿಂದ ಸಂಜೆ 5:50ರ ನಡುವೆ ಅಲ್ಲಿರುವ ಫುಟ್ ಓವರ್ ಬ್ರಿಜ್‌ನ್ನು ಕೆಡಹುವ ಕೆಲಸ ನಡೆಯಲಿದ್ದು, ಇದರಿಂದ ಅಲ್ಲಿಗೆ ವಿದ್ಯುಚ್ಛಕ್ತಿ ಹಾಗೂ ರೈಲುಗಳ ಸಂಚಾರವನ್ನು ನಿರ್ಬಂಧಿಸ ಲಾಗುತ್ತದೆ.
ಮಡಗಾಂವ್ ರೈಲು ನಿಲ್ದಾಣದ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಹಳೆಯ ಫುಟ್ ಓವರ್ ಬ್ರಿಜ್‌ನ್ನು ತೆರವು ಗೊಳಿಸಲಾಗುತ್ತದೆ. ಈ ಅವಧಿಯಲ್ಲಿ ಪ್ಲಾಟ್‌ಫಾರಂ ನಂ.1, 2, 3ನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಕೇವಲ ಪ್ಲಾಟ್‌ಫಾರಂ ನಂ.4, 5 ಮತ್ತು 6ರಲ್ಲಿ ಮಾತ್ರ ರೈಲುಗಳ ಸಂಚಾರ ಇರುತ್ತದೆ.
ಆದ್ದರಿಂದ ಪ್ರಯಾಣಿಕರು ರೈಲುಗಳು ನಿಲ್ಲುವ ಸರಿಯಾದ ಪ್ಲಾಟ್‌ಫಾರಂ ನ್ನು ಮೊದಲೇ ವಿಚಾರಿಸಿ ತಿಳಿದುಕೊಂಡು ಅಲ್ಲಿ ನಿಂತು ರೈಲು ಏರುವಂತೆ ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.