ಸಿಐಟಿಯುಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ

Update: 2026-08-15 17:58 IST

ಉಡುಪಿ, ಆ15: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಉಡುಪಿ ವಲಯ ಸಮಿತಿ ನೇತೃತ್ವ ದಲ್ಲಿ ತಮ್ಮ ಕಛೇರಿ ಮುಂದೆ 80ನೇ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸಲಾಯಿತು.

ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಶಶಿಧರ್ ಗೊಲ್ಲ ಧ್ವಜಾರೋಹಣ ನೆರವೇರಿಸಿದರು. ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು, ಉಡುಪಿ ಜಿಲ್ಲಾ ಕಟ್ಟಡ ಸಂಘದ ಅಧ್ಯಕ್ಷ ಸುಭಾಸ್ ನಾಯಕ್, ಕೋಶಾಧಿ ಕಾರಿ ವಾಮನ ಪೂಜಾರಿ, ಮುಖಂಡರಾದ ರಾಮ ಸಾಲ್ಯಾನ್, ಸರೋಜ.ಎಸ್., ಮುರಳಿ, ಉಡುಪಿ ಬೀಡಿ ಎಂಡ್ ಟೊಬ್ಯಾಕೋ ಲೇಬರ್ ಯೂನಿಯನ್ ಅಧ್ಯಕ್ಷೆ ನಳಿನಿ, ಕಾರ್ಯದರ್ಶಿ ಉಮೇಶ್ ಕುಂದರ್, ಸಾರಿಕ, ಶರ್ಮಿಳ, ಸೌಮ್ಯ ಉಪಸ್ಥಿತರಿದ್ದರು.

ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್.ಕಾಂಚನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News