ವಂದೇ ಮಾತರಂ ಕಾಲ್ನಡಿಗೆ ಜಾಥಾ ಅಭಿಯಾನ: ಕರಪತ್ರ ಬಿಡುಗಡೆಗೊಳಿಸಿದ ಮಟ್ಟಾರು ವಿಠ್ಠಲ್ ಕಿಣಿ
ಉಡುಪಿ, ಆ.30: ಮುಂದಿನ ಸೆ.7ರ ಸೋಮವಾರ ಬೆಳಗ್ಗೆ 8:30ಕ್ಕೆ ಕುಂದಾಪುರ ಹೊಸ ಬಸ್ ನಿಲ್ದಾಣದಿಂದ ಆರಂಭವಾಗಿ ಸಂಜೆ 5:00ಕ್ಕೆ ಸಾಸ್ತಾನದ ಬಸ್ ನಿಲ್ದಾಣದ ಬಳಿ ಸಮರೋಪಗೊಳ್ಳಲಿರುವ ವಂದೇ ಮಾತರಂ ಜನಜಾಗೃತ ಅಭಿಯಾನ ಮತ್ತು ಕಾಲ್ನಡಿಗೆ ಜಾಥದ ಕರಪತ್ರ ಬಿಡುಗಡೆಯನ್ನು 98 ವರ್ಷದ ವಯೋವೃದ್ದ ಮಟ್ಟಾರು ವಿಠ್ಠಲ್ ಕಿಣಿ ಅವರು ಬಿಡುಗಡೆಗೊಳಿಸಿದರು.
ಮಂಗಳೂರಿನ ತಮ್ಮ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ವಿಠ್ಠಲ್ ಕಿಣಿ, ವಂದೇ ಮಾತರಂ ಎಂಬುದು ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟಿರುವ ರಾಷ್ಟ್ರ ಭಕ್ತರ ಮಂತ್ರ. ವಂದೇ ಮಾತರಂ ಜನಜಾಗೃತಿ ಅಭಿಯಾನ ದಲ್ಲಿ ತಾವು ಪಾಲ್ಗೊಳ್ಳುವುದಾಗಿ ತಿಳಿಸಿದರು.
ವಂದೇ ಮಾತರಂ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ, ಪಕ್ಷದ ಮುಖಂಡರಾದ ರಮೇಶ್ ಕಂದೆಟ್ಟು ಮುಂತಾದ ಗಣ್ಯರು ಉಪಸ್ಥಿತರಿದ್ದರು.