ರಸ್ತೆ ಅಪಘಾತ: ಗಾಯಾಳು ಮಹಿಳೆ ಮೃತ್ಯು
ಕಾರ್ಕಳ, ಸೆ.3: ಬೆಳ್ಮಣ್ ಗ್ರಾಮದ ಇಂದಾರು ಎಂಬಲ್ಲಿ 2025ರ ನ.13ರಂದು ಸಂಭವಿಸಿದ ಅಪಘಾತದಲ್ಲಿ ಗಾಯ ಗೊಂಡಿದ್ದ ಮಹಿಳೆ ಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಅತ್ತೂರಿನ ಜಗದೀಶ್ ಆಚಾರ್ಯ್ ಎಂಬವರ ಪತ್ನಿ ಐಶ್ವರ್ಯ ಆಚಾರ್ಯ(28) ಎಂದು ಗುರುತಿಸಲಾಗಿದೆ. ದಂಪತಿ ಸ್ಕೂಟಿಯಲ್ಲಿ ನಿಟ್ಟೆಯಿಂದ ಬೆಳ್ಮಣ್-ಮುಂಡ್ಕೂರು ಮಾರ್ಗವಾಗಿ ಕಿನ್ನಿಗೋಳಿ ಕಡೆಗೆ ಹೋಗುತ್ತಿರುವಾಗ ಕಾರು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ದಂಪತಿ ರಸ್ತೆಗೆ ಬಿದ್ದು ಗಾಯಗೊಂಡಿದ್ದರು.
ಇದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಐಶ್ವರ್ಯ ಆಚಾರ್ಯ, ಸೆ.3ರಂದು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.