ಕುಂದಾಪುರ, ಸೆ.5: ಭಗವಾನ್ ಶ್ರೀಕೃಷ್ಣ ಹೇಳಿದಂತೆ ನಮ್ಮ ಕರ್ಮವನ್ನು ನಾವು ಮಾಡಿ ಪ್ರತಿಫಲ ದೇವರಿಗೆ ಬಿಡ ಬೇಕು. ಅದೇ ರೀತಿ ಸಾರ್ವಜನಿಕರ ಜೀವನದಲ್ಲಿ ನಾವು ಅಧಿಕಾರಿಗಳಾದವರು ಆದಷ್ಟು ಹೆಚ್ಚಿನ ಜನರಿಗೆ ಒಳಿತು ಮಾಡುವುದೇ ನಿಜವಾದ ದೇವರ ಕಾರ್ಯ. ಸಾಧ್ಯವಾದಷ್ಟು ಎಲ್ಲರಿಗೂ ಒಳ್ಳೆಯದನ್ನೇ ಬಯಸಬೇಕು ಎಂದು ಕುಂದಾಪುರ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್ ಹೇಳಿದರು.

ಕುಂದಾಪುರ ತಾಲೂಕು ಆಡಳಿತದ ವತಿಯಿಂದ ತಾಲೂಕು ಪ್ರಜಾ ಸೌಧ (ಮಿನಿ ವಿಧಾನಸೌಧ)ದ ಕೋರ್ಟ್ ಹಾಲ್‌ನಲ್ಲಿ ಶುಕ್ರವಾರ ನಡೆದ ಶ್ರೀಕೃಷ್ಣ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನೇರಂಬಳ್ಳಿ ಮಠದ ಅರ್ಚಕ ಪ್ರಾಣೇಶ್ ತಂತ್ರಿಗಳು ಧಾರ್ಮಿಕ ಪೂಜಾ ವಿಧಿಗಳನ್ನು ನೆರವೇರಿಸಿದರು. ಕುಂದಾಪುರ ತಾಪಂ ಕಾರ್ಯನಿರ್ವಣಾಧಿಕಾರಿ ಮಹೇಶ್ ಕೆ.ಜಿ., ಗ್ರೇಡ್-2 ತಹಶೀಲ್ದಾರ್‌ಗಳಾದ ವಸಂತ್ ಕುಮಾರ್, ಶಂಕಪ್, ಉಪತಹಶೀಲ್ದಾರ್‌ಗಳಾದ ಎಸ್.ವಿ.ವಿನಯ್, ಪ್ರಕಾಶ್ ಪೂಜಾರಿ, ಚಂದ್ರಶೇಖರ್ ಎಂ., ಕಾರ್ಮಿಕ ನಿರೀಕ್ಷಕ ವಿಜಯೇಂದ್ರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor