ಹೊಸದಿಲ್ಲಿ ಪ್ರತಿಭಟನೆಗೆ ಖಾಸಗಿ ಮದ್ಯ ಲಾಬಿಯಿಂದ ಆರ್ಥಿಕ ನೆರವಿನ ಶಂಕೆ: ಅನುಪಮಾ ಶೆಣೈ ಆರೋಪ
ಅನುಪಮಾ ಶೆಣೈ
ಉಡುಪಿ, ಅ.19: ಹೊಸದಿಲ್ಲಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಖಾಸಗಿ ಮದ್ಯದ ಲಾಬಿ ಹಣಕಾಸು ನೆರವು ನೀಡುತ್ತಿರಬಹುದು ಎಂದು ಮಾಜಿ ಡಿವೈಎಸ್ಪಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಅನುಪಮಾ ಶೆಣೈ ಶಂಕೆ ವ್ಯಕ್ತಪಡಿಸಿದ್ದಾರೆ.
ಉಡುಪಿ ಪ್ರೆಸ್ಕ್ಲಬ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), ಆಮ್ ಆದ್ಮಿ ಪಾರ್ಟಿ (ಎಎಪಿ) ಮತ್ತು ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಹಣಕಾಸಿನ ನೆರವಿನ ಮೂಲಗಳ ಬಗ್ಗೆ ಪ್ರಶ್ನೆಗಳನ್ನೆತ್ತಿ, ಈ ಪ್ರತಿಭಟನೆಗೆ ಖಾಸಗಿ ಮದ್ಯದ ಲಾಬಿ ಹಣಕಾಸು ನೆರವು ನೀಡುತ್ತಿರ ಬಹುದು ಎಂದರು.
ಸಿಜೆಪಿ ನೋಂದಾಯಿತ ಸಂಸ್ಥೆಯಲ್ಲದ ಕಾರಣ ಅದರ ಹಣಕಾಸಿನ ವ್ಯವಹಾರಗಳ ಹೊಣೆಗಾರಿಕೆಯ ಬಗ್ಗೆ ಅನುಮಾನಗಳಿವೆ. ದಿಲ್ಲಿಯ ಅಬಕಾರಿ ನೀತಿ ವಿವಾದಕ್ಕೆ ಸಂಬಂಧಿಸಿದಂತೆ ಎಎಪಿ ನಾಯಕ ಆರವಿಂದ್ ಕೇಬ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರನ್ನೂ ಟೀಕಿಸಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಮಾಡಿದ ’ಕಾಕ್ರೋಚ್’ ಹೇಳಿಕೆಯನ್ನು ಬಳಸಿಕೊಂಡು ಸಿಜೆಪಿ ನ್ಯಾಯಾಂಗದ ವಿರುದ್ಧ ಬೆಂಬಲ ಕ್ರೋಡೀಕರಿಸಲು ಪ್ರಯತ್ನಿಸುತ್ತಿದೆ ಎಂದು ಅನಪಮಾ ಆರೋಪಿ ಸಿದರು. ಈ ಚಳವಳಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧದ ರಾಜಕೀಯ ಹೋರಾಟವೆಂದು ಬಿಂಬಿಸಲಾ ಗುತ್ತಿದ್ದರೂ, ವಾಸ್ತವದಲ್ಲಿ ಇದು ನ್ಯಾಯಾಂಗವನ್ನು ಗುರಿಯಾಗಿಸಿಕೊಂಡಿದೆ ಎಂದು ಅವರು ದೂರಿದರು.
ಇದೇ ವೇಳೆ ರಾಜ್ಯದಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ರಾಜ್ಯ ಸಚಿವ ಸಂಪುಟದಿಂದ ಕೈಬಿಟ್ಟಿರುವು ದನ್ನೂ ಅನಪಮಾ ಶೆಣೈ ಖಂಡಿಸಿದರು. ರಾಜಣ್ಣ ಅವರಿಗೆ ಅನ್ಯಾಯವಾಗಿದೆ ಎಂದು ಹೇಳಿದ ಅವರು, ಅಕ್ಟೋಬರ್ 26ರೊಳಗೆ ಅವರನ್ನು ಮತ್ತೆ ಸಚಿವರನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದರು. ಸರ್ಕಾರ ಈ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.