ಉಡುಪಿ, ಅ.24: ನಗರದ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ನಾಪತ್ತೆಯಾದವರನ್ನು ನಾಸಿಕ್ ಮೂಲದ ಕಾವ್ಯ(29) ಹಾಗೂ ಅವರ ಪುತ್ರ ಶಿವಾಂಶ್(3) ಎಂದು ಗುರುತಿಸಲಾಗಿದೆ. ಕಾವ್ಯ ನಾಸಿಕ್‌ನ ಮನೆಯಿಂದ ಅ.22ರಂದು ಮೆಣಸೆಯಲ್ಲಿರುವ ಅವರ ಪತಿ ಯತೀಶ್ವರ ಅವರ ಮನೆಗೆ ಮಗು ಮತ್ತು ಸಂಬಂಧಿಕರ ಜೊತೆ ರೈಲಿನ ಮೂಲಕ ಹೊರಟಿದ್ದು, ಅ.23ರಂದು ಬೆಳಗ್ಗೆ ರೈಲು ಉಡುಪಿಗೆ ತಲುಪಿದ್ದು, ಬಳಿಕ ಇವರು ಮೂವರು ಅಲ್ಲಿಂದ ಅಟೋ ರಿಕ್ಷಾದಲ್ಲಿ ಉಡುಪಿಯಿಂದ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು.

ಈ ವೇಳೆ ಸಂಬಂಧಿಕರು ಟೀ ಕುಡಿಯಲು ಹೊಟೇಲ್‌ಗೆ ಹೋದಾಗ ಕಾವ್ಯ ತನ್ನ ಮಗುವಿನ ಜೊತೆ ನಾಪತ್ತೆಯಾಗಿ ದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor