ಸುಜಿತ್ ಪಿಂಟೊ - ಪ್ರಮೋದ್ - ಪ್ರದೀಪ್

ಬ್ರಹ್ಮಾವರ, ಅ.29: ರೌಡಿಶೀಟರ್ ಸುಜಿತ್ ಪಿಂಟೊ (43) ಹತ್ಯೆ ಪ್ರಕರಣದ ಆರೋಪಿ ಸಹೋದರರಿಬ್ಬರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಅ.27ರಂದು ರಾತ್ರಿ 8.30ರ ಸುಮಾರಿಗೆ ಬೈಕಾಡಿ ಗ್ರಾಮದ ಭದ್ರಗಿರಿ ಸರ್ಕಲ್ ಬಳಿ ಬೈಕಾಡಿ ಗ್ರಾಮದ ಪಡುಬೈಕಾಡಿಯ ಪ್ರಮೋದ್ ಪೂಜಾರಿ (39) ಹಾಗೂ ಆತನ ಅಣ್ಣ ಪ್ರದೀಪ್ ಪೂಜಾರಿ(45) ಎಂಬವರು ಸುಜಿತ್ ಪಿಂಟೊನನ್ನು ಸ್ಟೀಲ್ ರಾಡ್‌ನಿಂದ ಹತ್ಯೆ ಮಾಡಿದ್ದರು.

ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಿರುವುದರಿಂದ ಅ.30ರಂದು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿ ಪಡೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor