ವಿದೇಶದಲ್ಲಿ ಉದ್ಯೋಗದ ಹೆಸರಿನಲ್ಲಿ ಆನ್‌ಲೈನ್ ವಂಚನೆ: ಪ್ರಕರಣ ದಾಖಲು
ಬೈಂದೂರು, ಅ.29: ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ತರೆ ಗ್ರಾಮದ ಪ್ರಸನ್ನ ನಾಗೇಶ ದೇವಾಡಿಗ(37) ಎಂಬವರು ಉದ್ಯೋಗ್ಯಕ್ಕಾಗಿ ಆನ್‌ಲೈನ್ ಪ್ಲಾಟ್‌ಪಾರ್ಮ್ ಇನ್‌ಡೀಡ್ ಆಪರೇಷನ್ ಟೀಮ್‌ನಲ್ಲಿ ಪ್ರೋಪೈಲ್ ಅನ್ನು ಮಾಡಿದ್ದರು. ಅವರಿಗೆ ಇನ್‌ಡೀಡ್ ಆಪರೇಷನ್ ಟೀಮ್ ಹೈದರಾಬಾದ್‌ನವರೆಂದು ಹೇಳಿಕೊಂಡು ಪೋನ್ ಕರೆ ಮಾಡಿ ಸಿಂಗಾಪುರದಲ್ಲಿ ಇಂಜಿನಿಯರ್ ಜಾಬ್ ಆಗಿದ್ದು ಅದಕ್ಕಾಗಿ ಇಂಟರಿವ್ ಅಟೇಂಡ್ ಮಾಡುವಂತೆ ತಿಳಿಸಿದರು.
ಅದರಂತೆ ಇಂಟರಿವ್ ಅಟೆಂಡ್ ಮಾಡಿ ನಂತರ ಈಮೇಲ್ ಮೂಲಕ ಆಫರ್ ಲೇಟರ್ ಕಳುಹಿಸಿದ್ದು, ಅದರಂತೆ ಸಿಂಗಾಪುರ ಉದ್ಯೋಗಕ್ಕಾಗಿ ಪ್ರೊಡ್ಯುಸ್ ಮಾಡಲು ಅ.8ರಿಂದ ಅ.20ರವರಗೆ ಆರೋಪಿಗಳು ತಾವು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ವಿವಿಧ ಹಂತದಲ್ಲಿ ಒಟ್ಟು 409165 ರೂ. ಹಣವನ್ನು ಹಾಕಿಕೊಂಡು ವಂಚಿಸಿರುವುದಾಗಿ ದೂರಲಾಗಿದೆ.