ಕೊಂಕಣ ರೈಲ್ವೆ: ರೈಲು ಸಂಚಾರದಲ್ಲಿ ವ್ಯತ್ಯಯ
ಉಡುಪಿ, ನ.23: ಇದೇ ನ.29ರವರೆಗೆ ಕೊಂಕಣ ರೈಲು ಮಾರ್ಗದ ಮುಂಬಯಿ ವಿಭಾಗದ ದಿವಾದಲ್ಲಿ ವಿದ್ಯುತ್ ಬ್ಲಾಕ್ ನಡೆಯಲಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ನ.24, 25, 26, 27, 28ರಂದು ಮಂಗಳೂರು ಜಂಕ್ಷನ್ ಹಾಗೂ ಮುಂಬಯಿ ಸಿಎಸ್ಎಂಟಿ ನಡುವೆ ಸಂಚರಿಸುವ ನಂ.12134 ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು 50 ನಿಮಿಷಗಳ ಕಾಲ ಅಪ್ಟಾ ನಿಲ್ದಾಣದಲ್ಲಿ ತಡೆ ಹಿಡಿಯಲಾಗುವುದು.
ಅದೇ ರೀತಿ ನ.24 ಮತ್ತು 27ರಂದು ಎರ್ನಾಕುಲಂ ಜಂಕ್ಷನ್- ಪುಣೆ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಮತ್ತು ನ.25ರಂದು ಎರ್ನಾಕುಲಂ ಜಂಕ್ಷನ್ -ಎಚ್. ನಿಝಾಮುದ್ದೀನ್ ನಿಲ್ದಾಣದ ನಡುವೆ ಸಂಚರಿಸುವ ಸಾಪ್ತಾಹಿಕ ರೈಲಿನ ಸಂಚಾರವನ್ನು 109 ನಿಮಿಷ ಅಪ್ಟಾ ನಿಲ್ದಾಣದಲ್ಲಿ ತಡೆಹಿಡಿಯಲಾಗುವುದು ಎಂದು ಪ್ರಕಟಣೆ ತಿಳಿಸಿದೆ.