ಉಡುಪಿ, ನ.3: ಮುನಿಯಾಲು, ಹೆಬ್ರಿ ಹಾಗೂ ಅಜೆಕಾರು ಗ್ರಾಮಗಳ ಅಗ್ರಿಗೋಲ್ಡ್ ಬಾಂಡ್ ಹೊಂದಿರುವ 150 ಜನರಿಗೆ ಈಗಾಗಲೇ ಟೋಕಲ್ ನೀಡಲಾಗಿದ್ದು ದಾಖಲಾತಿ ಪರಿಶೀಲನೆಯು ನ.4ರಂದು ನಡೆಯಲಿದೆ.

ಉಡುಪಿ ತಾಲೂಕಿನ ಹೂಡೆ, ಕೆಮ್ಮಣ್ಣು ಹಾಗೂ ಸಂತೆಕಟ್ಟೆ ಗ್ರಾಮದವರಿಗೆ ನ.4ರಂದು ಟೋಕನ್ ನೀಡಲಾಗು ವುದು. ಇದರಲ್ಲಿ ಮೊದಲು ಬಂದ 100 ಜನರಿಗೆ ಆದ್ಯತೆ ನೀಡಲಾಗುವುದು. ಇವರ ದಾಖಲಾತಿ ಪರಿಶೀಲನೆಯು ನ.5ರಂದು ನಡೆಯಲಿದೆ.

ಉಳಿದ ಗ್ರಾಮಗಳ ಅಗ್ರಿಗೋಲ್ಡ್ ಬಾಂಡ್ ಹೊಂದಿರುವ ಗ್ರಾಮಸ್ಥರಿಗೆ ಬಾಂಡ್ ಪರಿಶೀಲನೆಗೆ ಮುಂದಿನ ದಿನಾಂಕ ವನ್ನು ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಬೆಳಿಗ್ಗೆ 10ಗಂಟೆಯಿಂದ ಸಂಜೆ 5 ಗಂಟೆ ಮಧ್ಯಾವಧಿಯಲ್ಲಿ ದೂರವಾಣಿ ಸಂಖ್ಯೆ: 0820-2526444ನ್ನು ಸಂಪರ್ಕಿಸಬಹುದು ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor