ಉಡುಪಿ, ನ.3: ಯಕ್ಷಗಾನದ ದಶಾವತಾರಿ ಎಂದೇ ಪ್ರಸಿದ್ಧರಾದ ಸೂರಿಕುಮೇರಿ ಗೋವಿಂದ ಭಟ್ಟರ ನೆನಪಿನಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಈ ವರ್ಷದಿಂದ ಯಕ್ಷಗಾನ ಪ್ರಶಸ್ತಿಯೊಂದನ್ನು ನೀಡಲಿದ್ದಾರೆ.

ಯಕ್ಷಗಾನದ ಆಹಾರ್ಯ, ಆಂಗಿಕ, ವಾಚಿಕ, ಸಾತ್ವಿಕ ಈ ನಾಲ್ಕೂ ಅಂಗಗಳಲ್ಲಿ ಸಿದ್ಧಿ- ಪ್ರಸಿದ್ಧಿ ಪಡೆದ ಸಾರ್ವಕಾಲಿಕ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾಗಿದ್ದ ಕೆ.ಗೋವಿಂದ ಭಟ್ಟರು ಈ ವರ್ಷ ನಮ್ಮನ್ನಗಲಿದ್ದು, ಈ ಕಲಾವಿದರ ಸ್ಮರಣೆಯಲ್ಲಿ ಯಕ್ಷಗಾನದ ಪೋಷಕರಾದ ಡಾ. ಟಿ. ಶ್ಯಾಮ್ ಭಟ್ ಪ್ರಶಸ್ತಿ ನಿಧಿಯೊಂದನ್ನು ಸ್ಥಾಪಿಸಿದ್ದಾರೆ.

ಕೆ.ಗೋವಿಂದ ಭಟ್ಟರ ಹೆಸರಿನಲ್ಲಿ ಮೊದಲ ಪ್ರಶಸ್ತಿಯನ್ನು ನವೆಂಬರ್ 15ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಿವಾನ ಶಿವಶಂಕರ ಭಟ್ ಇವರಿಗೆ ನೀಡಲಾಗುವುದು ಎಂದು ಯಕ್ಷಗಾನ ಕಲಾರಂಗ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor