ಸಿವಿಲ್ ಇಂಜಿನಿಯರ್‌ಗೆ 6.35 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು
Update: 2026-01-22 20:57 IST
ಉಡುಪಿ: ಅಪರಿಚಿತರು ಸಿವಿಲ್ ಇಂಜಿನಿಯರೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ವರ್ಗಾವಣೆ ಮಾಡಿ ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರಂಬಳ್ಳಿಯ ಸಿವಿಲ್ ಇಂಜಿನಿಯರ್ ಚೇತನ್ ಕುಮಾರ್ (39) ಎಂಬವರ ಎರಡು ಬ್ಯಾಂಕ್ ಖಾತೆಗಳಿಂದ ಜ.20 ರಂದು ರಾತ್ರಿ ಹಂತ ಹಂತವಾಗಿ ಒಟ್ಟು 6,35,900ರೂ. ಹಣವು ಅವರಿಗೆ ತಿಳಿಯದೇ ಬೇರೆ ಖಾತೆಗೆ ವರ್ಗಾವಣೆ ಯಾಗಿರುವುದಾಗಿ ದೂರಲಾಗಿದೆ. ಚೇತನ್ ಕುಮಾರ್ ಮೊಬೈಲ್‌ಗೆ ಬ್ಯಾಂಕ್‌ನಿಂದ ಬಂದ ಸಂದೇಶದಿಂದ ಈ ವಂಚನೆ ತಿಳಿದು ಬಂತೆನ್ನಲಾಗಿದೆ.