ಸರಕಾರಿ ನೌಕರರ ಅಧ್ಯಕ್ಷರ ವಿರುದ್ಧ ಸುಳ್ಳು ದೂರು: ಕ್ರಮಕ್ಕೆ ಮನವಿ
Update: 2023-07-26 21:57 IST
ಉಡುಪಿ, ಜು.26: ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ಹಾಗೂ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಮೇಲೆ ಸುಳ್ಳು ದೂರು ದಾಖಲಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂಘದ ಉಡುಪಿ ಜಿಲ್ಲಾ ನಿಯೋಗ ಜು.25ರಂದು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತು.
ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿ ಸಂಘ ಮತ್ತು ಸಂಘದ ಅಧ್ಯಕ್ಷರ ಮೇಲೆ ಸುಳ್ಳು ಆಪಾದನೆ ಮಾಡಿ ಸಂಘದ ಘನತೆಗೆ ಚ್ಯುತಿ ತರಲು ಯತ್ನಿಸಿದ ಐದು ಮಂದಿ ಸರಕಾರಿ ನೌಕರರ ಮೇಲೆ ಮೊಕದ್ದಮೆ ದಾಖಲಿಸಬೇಕು ಎಂದು ಸಂಘ ಉಡುಪಿ ಜಿಲ್ಲಾಧ್ಯಕ್ಷ ಅಂಪಾರು ದಿನಕರ ಶೆಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರಿಗೆ ಮನವಿ ನೀಡಲಾಯಿತು.