ಡಿ.2ರಂದು ಉಡುಪಿಯಲ್ಲಿ ಕೃಷಿಕರ ಸಭೆ
Update: 2025-11-30 21:18 IST
ಉಡುಪಿ, ನ.30: ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಕೃಷಿಕರ ಸಭೆ ಡಿ.2ರಂದು ಸಂಜೆ 4 ಗಂಟೆಗೆ ಉಡುಪಿ ಶ್ರೀಭಗವಾನ್ ನಿತ್ಯಾನಂದ ಮಂದಿರದ ಸಭಾಂಗಣದಲ್ಲಿ ನಡೆಯಲಿದೆ.
ಜಿಲ್ಲೆಯ ಕೃಷಿಕರ ವಿವಿಧ ಸಮಸ್ಯೆಗಳು, ಸಂಕಷ್ಟಗಳನ್ನು ಸರಕಾರ- ಜಿಲ್ಲಾಡಳಿತದ ಗಮನಕ್ಕೆ ತಂದು ಪರಿಹಾರೋಪಾಯ ಮಾರ್ಗಗಳ ಕಂಡು ಕೊಳ್ಳುವ ಬಗ್ಗೆ ರೈತ ಮುಖಂಡರುಗಳು ವಿಚಾರ ನಿಮಯ ಮಾಡಿಕೊಳ್ಳಲಿದ್ದಾರೆ.
ಈ ಸಭೆಯಲ್ಲಿ ನಿತ್ಯಾನಂದ ಸ್ವಾಮಿ ಮಂದಿರದ ಟ್ರಸ್ಟಿ ಕೆ.ದಿವಾಕರ ಶೆಟ್ಟಿ ಕೊಡವೂರು, ಸಿರಿತುಳು ಚಾವಡಿಯ ಗುರಿಕಾರ ಈಶ್ವರ್ ಚಿಟ್ಪಾಡಿ ಮತ್ತು ಉಡುಪಿ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಕಿನ್ನಿಮುಲ್ಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.