ಕಾಪು | ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ 1.33ಲಕ್ಷ ರೂ. ವಂಚನೆ
Update: 2025-12-09 21:48 IST
ಕಾಪು, ಡಿ.9: ಆನ್‌ಲೈನ್ ಟ್ರೇಡಿಂಗ್ ಹಣವನ್ನು ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಾವರ ಪಿತ್ರೋಡಿಯ ಅಶೋಕ್ ಆರ್.(42) ಎಂಬವವರಿಗೆ ಸುಮಾರು 3 ವರ್ಷಗಳಿಂದ ಆನ್‌ಲೈನ್ ಟ್ರೇಡಿಂಗ್ ವಾಟ್ಸ್ಪ್ ಗ್ರೂಪ್ ಮೂಲಕ ಆರೋಪಿ ರಾಜ್ಕುಮಾರ್ ಎಂಬಾತನ ಪರಿಚಯ ಇದ್ದು, ಆತ ಡಿ.3ರಂದು ಅಶೋಕ್ ಅವರಿಗೆ ಕರೆ ಮಾಡಿ 1,33,589 ರೂ. ಹಣವನ್ನು ತನ್ನ ಖಾತೆಗೆ ಜಮಾ ಮಾಡುವಂತೆ ತಿಳಿಸಿದಂತೆ ಅಶೋಕ್ ಹಣವನ್ನು ಹಾಕಿದ್ದರು.
ಆದರೆ ಆರೋಪಿ ಆನ್‌ಲೈನ್ ಟ್ರೇಡಿಂಗ್ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಪಡೆಯಬಹುದು ಎಂಬುದಾಗಿ ನಂಬಿಸಿ ಅಶೋಕ್ ಅವರಿಂದ ಒಟ್ಟು 1,33,589 ರೂ. ಹಣವನ್ನು ಪಡೆದು ವಂಚಿಸಿರುವುದಾಗಿ ದೂರಲಾಗಿದೆ.