×
Ad

ಉಡುಪಿ | ವಾಯುಸೇನೆಯ ಕ್ಯಾ.ಸಂದೀಪ್ ಶೆಟ್ಟಿಗೆ ವಿಶಿಷ್ಟ ಸೇವಾ ಪದಕ

Update: 2026-01-26 16:31 IST

ಉಡುಪಿ : ಕರಾವಳಿಯ ವಾಯುಸೇನೆ ಗ್ರೂಪ್ ಕ್ಯಾಪ್ಟನ್ ಸಂದೀಪ್ ಶೆಟ್ಟಿ ಅವರು 77ನೇ ಗಣರಾಜ್ಯೋತ್ಸವದ ಸಂದರ್ಭ ರಾಷ್ಟ್ರಪತಿಗಳು ನೀಡುವ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

ಭಾರತೀಯ ಸೇನೆಯು ಪಾಕಿಸ್ತಾನದ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ 2025ರ ಮೇ ತಿಂಗಳಲ್ಲಿ ಭಾರತದ ಸೇನೆ, ನೌಕಾಪಡೆ ಮತ್ತು ವಾಯುಪಡೆ ಜಂಟಿಯಾಗಿ ನಡೆಸಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಇವರು ಭಾಗಿಯಾಗಿದ್ದರು.

ಇವರು ಸದಾಶಿವ ಶೆಟ್ಟಿ ಕೊಂಡಾಡಿ ಮತ್ತು ದೇವಕಿ ಶೆಟ್ಟಿ ಶಾನಕಟ್ಟು ಅವರ ಪುತ್ರ. ಸಂದೀಪ್ ಶೆಟ್ಟಿ ಕಳೆದ 20 ವರ್ಷಗಳಿಂದ ಭಾರತೀಯ ವಾಯು ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ 2 ವರ್ಷಗಳಿಂದ ಕಾಶ್ಮೀರದ ಶ್ರೀನಗರದ ವಾಯುನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News